ಸನ್ಮಾರ್ಗ ವಾರ್ತೆ
ಮೈಸೂರು: ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ (HRS) ವತಿಯಿಂದ ಮೈಸೂರು ಝೋನ್ನ ಹೊಣೆಗಾರರ ಸಭೆಯು ಮೈಸೂರಿನ ಆಪ್ನಾ ಘರ್, ಎಸ್.ಎಸ್. ನಗರ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ HRSನ ಸಹಾಯಕ ನಿರ್ದೇಶಕರಾದ ಲಬೀದ್ ಶಾಫಿ ಅವರು ಮುಖ್ಯ ಮಾರ್ಗದರ್ಶನ ನೀಡಿದರು. ಸಂಘಟನೆಯ ಧ್ಯೇಯ, ಕಾರ್ಯವಿಧಾನ, ಸ್ವಯಂಸೇವಕರ ಜವಾಬ್ದಾರಿಗಳು ಹಾಗೂ ಸಮಾಜಸೇವೆಯಲ್ಲಿ ಅವರ ಮಹತ್ವದ ಪಾತ್ರವನ್ನು ಅವರು ಪ್ರೇರಣಾದಾಯಕವಾಗಿ ವಿವರಿಸಿದರು.
ಸಭೆಯಲ್ಲಿ ಮೈಸೂರು, ಹುಣಸೂರು ಹಾಗೂ ಮಂಡ್ಯ ಭಾಗಗಳಿಂದ ಮಹಿಳಾ ಮತ್ತು ಪುರುಷ ಸ್ವಯಂಸೇವಕರು, ಗ್ರೂಪ್ ಲೀಡರ್ಗಳು ಹಾಗೂ ಹೊಣೆಗಾರರು ಉತ್ಸಾಹದಿಂದ ಭಾಗವಹಿಸಿದ್ದರು.
ರಾಜ್ಯ ಮಟ್ಟದಲ್ಲಿ HRS ಕೈಗೆತ್ತಿಕೊಂಡಿರುವ ಬೆಳಗಾವಿ ಜಿಲ್ಲೆಯ ಹಿರೇ ಹಟ್ಟಿಹೊಳಿ ಗ್ರಾಮದ ನೆರೆ ಸಂತ್ರಸ್ತರಿಗಾಗಿ 28 ಮನೆಗಳ ನಿರ್ಮಾಣ ಯೋಜನೆ ಕುರಿತು HRSನ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮರಕಡ ಅವರು ಸಮಗ್ರ ಮಾಹಿತಿ ನೀಡಿದರು. ಯೋಜನೆಯ ಹಿನ್ನೆಲೆ, ಇದುವರೆಗಿನ ಪ್ರಗತಿ, ಮುಂದಿನ ಕಾರ್ಯಯೋಜನೆ ಹಾಗೂ ಅಗತ್ಯವಿರುವ ನಿಧಿ ಸಂಗ್ರಹದ ಕುರಿತು ಪವರ್ಪಾಯಿಂಟ್ (PPT) ಪ್ರಸ್ತುತಿಯ ಮೂಲಕ ವಿವರಿಸಿದರು.

ನಂತರ HRSನ ರಾಜ್ಯ ಜೊತೆ ಕಾರ್ಯದರ್ಶಿ ಹೈದರ್ ಅಲಿ ಅವರು ಹಿರೇ ಹಟ್ಟಿಹೊಳಿ ವಸತಿ ನಿರ್ಮಾಣ ಯೋಜನೆಗಾಗಿ ಸಿದ್ಧಪಡಿಸಲಾದ ಮಾಹಿತಿಯ ವಿಡಿಯೊವನ್ನು ಪ್ರದರ್ಶಿಸಿದರು. ವಿಡಿಯೊವು ಸಭೆಯಲ್ಲಿ ಭಾಗವಹಿಸಿದವರಲ್ಲಿ ಯೋಜನೆಯ ಕುರಿತು ಹೆಚ್ಚಿನ ಅರಿವು ಮತ್ತು ಸೇವಾಭಾವವನ್ನು ಮೂಡಿಸಿತು.
ಬಳಿಕ HRSನ ವಿವಿಧ ಗ್ರೂಪ್ಗಳ ಕಾರ್ಯಚಟುವಟಿಕೆಗಳ ಅವಲೋಕನ ನಡೆಸಲಾಯಿತು. 2026–27ನೇ ಸಾಲಿನ ವಾರ್ಷಿಕ ಕಾರ್ಯಯೋಜನೆಯನ್ನು ವಿವರಿಸಿ, ಪ್ರತಿಯೊಂದು ಗ್ರೂಪ್ನಲ್ಲಿ ಕಡ್ಡಾಯವಾಗಿ ಮಾಸಿಕ ಸಭೆಗಳನ್ನು ಆಯೋಜಿಸುವುದು, ವಾರ್ಷಿಕ ಗುರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದು ಹಾಗೂ ಹೊಸ ಸ್ವಯಂಸೇವಕರನ್ನು ಬೆಳೆಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಲಾಯಿತು.
ಸಮಾರೋಪ ಭಾಷಣದಲ್ಲಿ ಲಬೀದ್ ಶಾಫಿ ಅವರು, ನಮ್ಮ ಎಲ್ಲ ಕಾರ್ಯಗಳ ಉದ್ದೇಶ ಸೃಷ್ಟಿಕರ್ತನ ಸಂತೃಪ್ತಿ ಹಾಗೂ ಪರಲೋಕದ ಯಶಸ್ಸಾಗಿರಬೇಕು. ಪ್ರತಿಯೊಂದು ಗ್ರೂಪ್ನಲ್ಲಿ ನಿಯಮಿತ ಮಾಸಿಕ ಸಭೆಗಳನ್ನು ನಡೆಸಬೇಕು. ಪ್ರಕೃತಿ ವಿಕೋಪ ಅಥವಾ ಯಾವುದೇ ಅನಾಹುತ ಸಂಭವಿಸಿದಾಗ ತಕ್ಷಣ ಸ್ಪಂದಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ನಮ್ಮ ಸೇವಾ ಕಾರ್ಯಗಳ ಮೂಲಕ ಸಮಾಜದಲ್ಲಿ ವಿಶ್ವಾಸ, ಉತ್ತಮ ಪರಿಚಯ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸಬೇಕು,” ಎಂದು ಕರೆ ನೀಡಿದರು.
ಸಭೆಯಲ್ಲಿ ಹಿರೇ ಹಟ್ಟಿಹೊಳಿ ವಸತಿ ನಿರ್ಮಾಣ ಯೋಜನೆಗಾಗಿ ಮೈಸೂರು ಝೋನ್ಗೆ ನಿಗದಿಪಡಿಸಿರುವ ನಿಧಿ ಸಂಗ್ರಹ ಗುರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ರಾಜ್ಯ ಕಚೇರಿಗೆ ಸಲ್ಲಿಸಲು ನಿರ್ಧರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಝೋನಲ್ ಲೀಡರ್ ಅಸದುಲ್ಲಾ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಸ್ಥಳೀಯ ಅಧ್ಯಕ್ಷರಾದ ಅಸ್ಲಾಂ ಅವರು ಹಿತೋಪದೇಶ ನೀಡಿ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಮಾಪ್ತಿಯಾಯಿತು.













