ಪೊಲೀಸ್ ಲಾಠಿ ಚಾರ್ಜ್: ಮಧ್ಯಪ್ರದೇಶದಲ್ಲಿ ದಲಿತ ಕುಟುಂಬದ 10 ತಿಂಗಳ ಮಗು ಸಾವು

0
1186

ಸನ್ಮಾರ್ಗ ವಾರ್ತೆ

ರಾಮನಗರ ಗಡೊಯಿ: ದಲಿತ ರೈತ ಕುಟುಂದ ಹತ್ತು ತಿಂಗಳ ಮಗು ಪೊಲೀಸ್ ಲಾಠಿ ಚಾರ್ಜಿನಿಂದಾಗಿ ದಾರುಣವಾಗಿ ಮೃತಪಟ್ಟಿದೆ. ಕುಟುಂಬ ಪೊಲೀಸರು ಮಗುವಿಗೆ ಲಾಠಿಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ನರ್ವರ್ ತೆಹಸಿಲ್‍ನ ದೂರದ ಗ್ರಾಮ ರಾಮನಗರ ಗಡೊಯಿಯಲ್ಲಿ ಘಟನೆ ನಡೆದಿದೆ.

ಗ್ರಾಮದ ಚರಂಡಿ ನೀರು ಹರಿದು ಹೋಗಲು ಕಾಲುವೆ ನಿರ್ಮಾಣದ ಕುರಿತು ವಿವಾದ ಆಗಿತ್ತು. ಪೊಲೀಸರು ಮಧ್ಯಪ್ರವೇಶ ಮತ್ತು ಮಗು ಮೃತಪಡಲು ಕಾರಣವಾಗಿದೆ. ಶಿವಪುರಿ ಜಿಲ್ಲೆಯಿಂದ 60 ಕಿಲೋ ಮೀಟರ್ ದೂರದಲ್ಲಿ ಗ್ರಾಮವಿದೆ. ಹೊಸ ಕಾಲುವೆಯಿಂದ ಕೃಷಿ ಜಮೀನಿಗೆ ಮಲಿನ ನೀರು ಬರುತ್ತದೆ ಎಂದು ದಲಿತ ಕುಟುಂಬದ ಅಶೋಕ್ ಎಂಬ ವ್ಯಕ್ತಿ ದೂರು ನೀಡಿದ್ದರು. ಇದು ವಿವಾದಕ್ಕೆ ತಿರುಗಿ ಚರಂಡಿ ನೀರು ಹರಿದು ಹೋಗುವ ಕಾಲುವೆ ಮಾಡದಂತರ ಅಡ್ಡ ಬಂದ ಹಿನ್ನೆಲೆಯಲ್ಲಿ ಕುಟುಂಬದವರ ಮೇಲೆ ಪೊಲೀಸರು ಲಾಠಿ ಚಾರ್ಜು ಮಾಡಿದ್ದಾರೆ.

ಲಾಠಿ ಚಾರ್ಜಿನಿಂದ ಕುಟುಂಬದ ಮಹಿಳೆಯರು ಮಕ್ಕಳ ಸಹಿತ ಹಲವರು ಗಾಯಗೊಂಡರು. ಇದೇ ವೇಳೆ ಹತ್ತು ತಿಂಗಳ ಮಗುವಿಗೆ ಏಟು ಬಿದ್ದಿದೆ. ಆಸ್ಪತ್ರೆಗೆ ಕರೆದುಕೊಂಡು ಹೋದರು ಮಗು ಬದುಕಿ ಉಳಿಯಲಿಲ್ಲ.

ಆದರೆ ಮಗುವಿನ ಸಾವಿನ ಕುರಿತು ಪೊಲೀಸರು ವಿಚಿತ್ರ ವಿವರಗಳನ್ನು ಹೇಳುತ್ತಿದ್ದಾರೆ. ಮಗು ಗಂಭೀರ ಹೃದಯ ರೋಗದಿಂದ ಬಳಲುತ್ತಿತ್ತು. ಈಗ ಕುಟುಂಬದವರು ಮಗುವಿನ ಮೃತದೇಹ ಮುಂದಿಟ್ಟು ಲಾಭವೆತ್ತಲು ನೋಡುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬೇರೆಯವರ ವಿರುದ್ಧ ಎಸ್‍ಸಿಎಸ್‍ಟಿ ಕಾನೂನಿನಂತೆ ದೂರು ನೀಡಿ ದೊಡ್ಡ ಮೊತ್ತದ ಹಣ ಕಬಳಿಸುವುದು ಕುಟುಂಬದ ಖಾಯಂ ರೂಢಿ ಎಂದು ಪೊಲೀಸರು ಹೇಳುತ್ತಿದ್ದಾರೆ.