ಮಾನಸಿಕ ಅಸ್ವಸ್ಥ ಭಿಕ್ಷುಕನ ಅಂತಿಮ ಸಂಸ್ಕಾರಕ್ಕೆ ನೆರೆದ ಜನಸ್ತೋಮ…

0
688

ಸನ್ಮಾರ್ಗ ವಾರ್ತೆ

ಬಳ್ಳಾರಿ: ಬಳ್ಳಾರಿಯಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದ ಮಾನಸಿಕ ಅಸ್ವಸ್ಥ ಬಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಾವಿರಾರು ಜನರು ನೆರೆದರು. ಬಸ್ಯಾ‌ರ ಕೈಯಿಂದ ಹಣ ಪಡೆದವರಿಗೆಲ್ಲ ಅದೃಷ್ಟ ಖುಲಾಯಿಸಿದೆ ಎಂದು ಜನಜನಿತವಾದ್ದರಿಂದ ಮಾನಸಿಕ ಅಸ್ವಸ್ಥ ಬಸ್ಯಾ ಜನಪ್ರಿಯ ವ್ಯಕ್ತಿ ಎನಿಸಿಕೊಂಡಿದ್ದರು. 45 ವರ್ಷದ ಹುಚ್ಚ ಬಸ್ಯಾರಿಗೆ ಸ್ವಲ್ಪ ಮಾನಸಿಕ ಅಸ್ವಾಸ್ಥ್ಯ ಇತ್ತು ಎನ್ನಲಾಗಿದ್ದು ಅವರನ್ನು ಎಲ್ಲರೂ ಅಪ್ಪಾಜಿ ಎಂದು ಕರೆಯುತ್ತಿದ್ದರು.

ಒಂದು ರೂಪಾಯಿಗಿಂತ ಹೆಚ್ಚು ಭಿಕ್ಷೆ ಎತ್ತುವುದಿಲ್ಲ. ಹೆಚ್ಚು ಹಣ ಕೊಟ್ಟರೆ ಅದನ್ನು ಹಿಂದಿರುಗಿಸುತ್ತಿದ್ದರು. ನವೆಂಬರ್ ಹನ್ನೆರಡರಂದು ಬಸ್‍ ಢಿಕ್ಕಿಯಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರವಿವಾರ ಅಂತಿಮ ಸಂಸ್ಕಾರ ಕಾರ್ಯ ನಡೆಯಿತು. ವಿದಾಯ ಕೋರಲು ಸಾವಿರಾರು ಬಂದಿ ಬಳ್ಳಾರಿಗೆ ಬಂದಿದ್ದರು. ಬ್ಯಾಂಡ್ ವಾದ್ಯದೊಂದಿಗೆ ಅವರ ಮೃತದೇಹವನ್ನು ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ರಾಜಕಾರಣಿಗಳಿಗೂ ಬಸ್ಯಾರೊಂದಿಗೆ ಸಂಪರ್ಕ ಇತ್ತು ಎನ್ನಲಾಗುತ್ತಿದೆ.