ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಅದಾನಿ’ ಹೆಸರು- ಎನ್‍ಸಿಪಿ ವಿರೋಧ

0
539

ಸನ್ಮಾರ್ಗ ವಾರ್ತೆ

ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಬದಲಿಸುವುದನ್ನು ಎನ್‌ಸಿಪಿ ಮುಖಂಡ ಹಾಗೂ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ವಿರೋಧಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದ ಹೆಸರು ಅದಾನಿ ವಿಮಾನ ನಿಲ್ದಾಣ ಎಂದು ಹೆಸರು ಬದಲಿಸಿ ಹಾಕಿದ ಬೋರ್ಡುಗಳನ್ನು ಕಳೆದ ದಿವಸ ಶಿವಸೇನೆಯ ಕಾರ್ಯಕರ್ತರು ನಾಶಪಡಿಸಿದ್ದರು.

ವಿಮಾನ ನಿಲ್ದಾಣ ಪ್ರಾಧಿಕಾರ ಶಿವಾಜಿ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇರಿಸಿದ್ದು. ಜಿವಿಕೆ ವಿಮಾನ ನಿಲ್ದಾಣ ನಿರ್ವಹಿಸುತ್ತಿತ್ತು. ಜಿವಿಕೆಯ ಶೇರುಗಳನ್ನು ಅದಾನಿ ಗುಂಪು ಖರೀದಿಸಿದ್ದರಿಂದ ವಿಮಾನ ನಿಲ್ದಾಣ ಸಹ ಮಾಲಕರಾಗಿದ್ದು ಈ ಆಧಾರದಲ್ಲಿ ಹೆಸರನ್ನು ಬದಲಿಸಲು ಸಾಧ್ಯವಿಲ್ಲ. ಈ ಹಿಂದೆ ಜಿವಿಕೆ ಹೀಗೆ ಮಾಡಿರಲಿಲ್ಲ ಎಂದು ನವಾಬ್ ಮಲಿಕ್ ಹೇಳಿದರು.

ಈ ಕ್ರಮ ಮಹಾರಾಷ್ಟ್ರವನ್ನು ಮಾತ್ರವಲ್ಲ ದೇಶದ ಭಾವನೆಗೆ ಹಾನಿ ತಟ್ಟುವಂತೆ ಮಾಡುತ್ತಿದೆ. ಏರ್ಪೋಟಿನಲ್ಲಿ ವಿಐಪಿ ಗೇಟಿಗೆ ಅದಾನಿ ಹೆಸರಿಟ್ಟದ್ದನ್ನೂ ಒಪ್ಪಲು ಸಾಧ್ಯವಿಲ್ಲ. ಇದು ಜನರ ಭಾವನೆಗೆ ಹಾನಿಮಾಡುತ್ತದೆ. ಭವಿಷ್ಯದಲ್ಲಿ ಸಮಸ್ಯೆ ಸೃಷ್ಟಿಯಾಗಲು ಕಾರಣವಾಗಬಹುದು. ಇದನ್ನು ಇಲ್ಲದಂತೆ ಮಾಡಲು ಮುನ್ನೆಚ್ಚರಿಕೆ ವಹಿಸಬೇಕೆಮದು ಹಿರಿಯ ಎನ್‍ಸಿಪಿ ನಾಯಕರಾದ ಮಲಿಕ್ ಹೇಳಿದರು.

ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದ ಮುಂದೆ ಅದಾನಿ ವಿಮಾನ ನಿಲ್ದಾಣ ಎಂದು ಬರೆದ ಬೋರ್ಡನ್ನು ಸೋಮವಾರ ಶಿವಸೇನೆ ಕಾರ್ಯಕರ್ತರು ನಾಶಪಡಿಸಿದರು. ಘಟನೆ ವಿವಾದವಾದ ಬೆನ್ನಿಗೆ ವಿಮಾನ ನಿಲ್ದಾಣದ, ಟರ್ಮಿನಲ್‍ನ ಹೆಸರು ಬದಲಾಯಿಸುವ ಉದ್ದೇಶ ಇಲ್ಲ ಎಂದು ಅದಾನಿ ಗುಂಪು ಹೇಳಿಕೆ ನೀಡಿದೆ.