ಭಾರತದಿಂದ ಬರುವವರು ಕೊರೋನ ತರುತ್ತಿದ್ದಾರೆ- ನೇಪಾಳ ಪ್ರಧಾನಿ

0
558

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಮೇ.26: ಭಾರತದಿಂದ ಬರುವ ನೇಪಾಳಿ ಪ್ರಜೆಗಳು ಕೊರೋನ ಹರಡುತ್ತಿದ್ದಾರೆ ಎಂದು ನೇಪಾಳದ ಪ್ರಧಾನಿ ಕೆಪಿ ಒಲಿ ಹೇಳಿದರು. ಅಂತಾರಾಷ್ಟ್ರಿಯ ಗಡಿಗಳನ್ನು ದಾಟಿ ಬರುವವರು ಕಡ್ಡಾಯವಾಗಿ ಕೊರೋನ ತಪಾಸಣೆಗೊಳಗಾಗಬೇಕೆಂದು ವಿಶ್ವ ಆರೋಗ್ಯ ಸಂಘಟನೆಯ ನಿರ್ದೇಶವನ್ನು ಪಾಲಿಸದೇ ಇರುವುದು ಈ ಸಮಸ್ಯೆಗೆ ಕಾರಣವೆಂದು ಅವರು ಹೇಳಿದರು.

ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಜನರು ನೇಪಾಳ ದಾಟುತ್ತಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಒಬ್ಬರು, ಗುಂಪಾಗಿ ಬರುವ ಇವರ ಸಂಖ್ಯೆ ಎಷ್ಟು ಎಂದು ಕೂಡ ಅಧಿಕೃತವಾಗಿ ದಾಖಲಿಸಿಕೊಳ್ಳಲು ಆಗಿಲ್ಲ. ಇದರಲ್ಲಿ ಹೆಚ್ಚಿನವರು ಭಾರತದಲ್ಲಿ ಕೆಲಸ ಮಾಡುವವರು ನೇಪಾಳದ ಕಾರ್ಮಿಕರು ಎಂದು ನೇಪಾಳದ ಪ್ರಧಾನಿ ಹೇಳಿದ್ದು, ಸೋಮವಾರ ದೇಶವನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು.