ಮೊದಲ ಸಂಪೂರ್ಣ ನೇತ್ರ- ಮುಖ ಬದಲಾವಣಾ ಶಸ್ತ್ರಕ್ರಿಯೆ ಮಾಡಿದ ನ್ಯೂಯಾರ್ಕ್ ವೈದ್ಯರು

0
209

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್, ನ.11: ಜಗತ್ತಿನ ಮೊದಲ ಸಂಪೂರ್ಣ ನೇತ್ರ- ಮುಖ ಬದಲಾವಣೆ ಶಸ್ತ್ರಕ್ರಿಯೆ ನ್ಯೂಯಾರ್ಕ್ ನ ವೈದ್ಯರು ಪೂರ್ಣಗೊಳಿಸಿದ್ದಾರೆ.

ನ್ಯೂಯಾರ್ಕಿನ ವೈದ್ಯರು ಎನ್‍ಐವೈ ಲ್ಯಾಂಗನ್ ಹೆಲ್ತ್‌ ನ ವೈದ್ಯರ ತಂಡ ಆರನ್ ಜೇಮ್ಸ್(46) ಎಂಬ ವ್ಯಕ್ತಿಯ ಕಣ್ಣು ಬದಲಾಯಿಸಿದ್ದಾರೆ. ಈತ ವಿದ್ಯುತ್ ಲೈನ್ ಕೆಲಸ ಮಾಡುತ್ತಿದ್ದು 2021ರಲ್ಲಿ ಕೆಲಸದ ವೇಳೆ ಹೈವೋಲ್ಟೇಜ್ ಲೈನ್‍ನಲ್ಲಿ ಆಕಸ್ಮಿಕ ಸ್ಪರ್ಶದಿಂದ ಮುಖ ಅರ್ಧ ಸುಟ್ಟು ಹೋಗಿತ್ತು. ಈ ವರ್ಷ ಮೇಯಲ್ಲಿ ಅವರ ಅರ್ಧ ಮುಖ ಬದಲಾವಣೆಗೆ ಶಸ್ತ್ರಕ್ರಿಯೆ ನಡೆದಿದೆ. ಇದರಲ್ಲಿ 140 ಆರೋಗ್ಯ ತಜ್ಞರು ಇದ್ದರು.

ಕಣ್ಣು ಮತ್ತು ಮುಖ ಬದಲಾವಣೆ ಶಸ್ತ್ರಕ್ರಿಯೆಗೆ 21 ಗಂಟೆ ತಗುಲಿದೆ. ನೇತ್ರ ಚಿಕಿತ್ಸಾ ಕ್ಷೇತ್ರದ ಹೊಸ ಅಧ್ಯಾಯ ಇದು ಎಂದು ವೈದ್ಯರು ಹೇಳಿದ್ದಾರೆ. ಆರನ್‍ನಿಗೆ ದೃಷ್ಟಿ ಬಂದೀತೆ ಎಂಬ ವಿಷಯ ಇನ್ನೂ ಸ್ಪಷ್ಟವಿಲ್ಲ. ಆದರೆ ಆರನ್ ಗುಣಮುಖರಾಗುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಮುಖ ಬದಲಿಸಿಟ್ಟ ಕಣ್ಣಿಗೆ ಸಮಸ್ಯೆ ಇದೆ ಎಂದು ಅನಿಸುವುದಿಲ್ಲ ಎಂದಿರುವ ವೈದ್ಯರು ಇವರ ಬಲಗಣ್ಣು ಮೊದಲೇ ಸರಿಯಾಗಿತ್ತು ಎಂದು ತಿಳಿಸಿದರು.