14 ಗಂಟೆಯಲ್ಲಿ 800 ಭೂಕಂಪ: ಐಸ್‍ಲೆಂಡಿನಲ್ಲಿ  ತುರ್ತು ಪರಿಸ್ಥಿತಿ

0
190

ಸನ್ಮಾರ್ಗ ವಾರ್ತೆ

ಪದೇ ಪದೇ ಭೂಕಂಪಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಐಸ್‌ಲ್ಯಾಂಡ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ನೈಋತ್ಯ ಐಸ್‌ಲ್ಯಾಂಡ್ ನ ರೇಕ್ಜಾನ್ಸ್ ಪರ್ಯಾಯ ದ್ವೀಪದಲ್ಲಿ ಭೂಕಂಪ ಸಂಭವಿಸಿದೆ. ಎರಡು ಪ್ರಬಲ ಭೂಕಂಪಗಳು ಮೊದಲು ಗ್ರಿಂಡವಿಕ್ ಪಟ್ಟಣದ ಬಳಿ ಸಂಭವಿಸಿದವು. ಐಸ್ಲ್ಯಾಂಡ್, ಗ್ರೀನ್ಲ್ಯಾಂಡ್ ಮತ್ತು ಯುರೋಪ್ ನಡುವೆ ಇದೆ. ನಿರಂತರ ಕಂಪನಗಳು ಜ್ವಾಲಾಮುಖಿ ಸ್ಫೋಟಗಳಿಗೆ ಕಾರಣವಾಗಬಹುದು ಎಂಬ ವರದಿಗಳ ನಂತರ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.

ಇಲ್ಲಿ ಸುಮಾರು 4000 ಜನರು ವಾಸಿಸುತ್ತಿದ್ದಾರೆ. ಬಲವಾದ ಕಂಪನದ ಬಳಿಕ ಜನರು ಹೊರಬಂದು ಓಡಲು ಪ್ರಾರಂಭಿಸಿದರು. ಅಕ್ಟೋಬರ್ ಅಂತ್ಯದಿಂದ ಇಲ್ಲಿಯವರೆಗೆ 24000 ಸಣ್ಣ ಕಂಪನಗಳು ಸಂಭವಿಸಿವೆ. ಕಳೆದ ರಾತ್ರಿ, ಮಧ್ಯರಾತ್ರಿಯೊಂದರಲ್ಲೇ 800 ಭೂಕಂಪಗಳು ದಾಖಲಾಗಿವೆ.

ಭಾರಿ ಭೂಕಂಪ ಸಂಭವಿಸಿದರೆ ಜನರನ್ನು ಸ್ಥಳಾಂತರಿಸುವ ಯೋಜನೆಯನ್ನೂ ಸಿದ್ಧಪಡಿಸಲಾಗಿದೆ. ಭೂಕಂಪದ ನಂತರ ಪೊಲೀಸರು ಗ್ರಿಂಡವಿಕ್‌ಗೆ ಉತ್ತರ-ದಕ್ಷಿಣ ರಸ್ತೆಯನ್ನು ಮುಚ್ಚಿದರು.