ವೈದ್ಯರ ಮುಖದ ಮಾಸ್ಕನ್ನು ಎಳೆದ ನವಜಾತ ಶಿಶು: ದುಬೈಯ ಡಾ. ಸಮೀರ್ ಹಂಚಿಕೊಂಡ ಫೋಟೋ ವೈರಲ್

0
1029

ಸನ್ಮಾರ್ಗ ವಾರ್ತೆ

ದುಬೈ ಮೂಲದ ಡಾ. ಸಮೀರ್ ರವರು ಹಂಚಿಕೊಂಡ ಫೋಟೋ ಒಂದು ಜಾಗತಿಕ ಗಮನಸೆಳೆದಿದೆ. ನವಜಾತ ಶಿಶು ಅವರ ಮುಖದ ಮಾಸ್ಕನ್ನು ಎಳೆದಿರುವ ಫೋಟೋವನ್ನು ಶಿಶುವಿನ ತಂದೆ ಕ್ಲಿಕ್ಕಿಸಿದ್ದು, ಡಾಕ್ಟರ್ ಸಮೀರ್ ಅವರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಮಾಸ್ಕನ್ನು ಕಳಚಿ ಸಹಜ ಬದುಕಿನತ್ತ ಮರಳನ್ನು ನಾವೆಲ್ಲ ಕಾಯುತ್ತಿದ್ದೇವೆ ಎಂದವರು ಆ ಫೋಟೋದ ಜೊತೆ ಬರೆದುಕೊಂಡಿದ್ದು, ಈ ಫೋಟೋ ಜಗತ್ತು ಸಹಜ ಬದುಕಿನತ್ತ ಮರಳುತ್ತಿರುವ ಸಂಕೇತ ಎಂಬಂತೆ ಬಿಂಬಿತವಾಗಿದೆ ಮತ್ತು ಅದೇ ರೀತಿಯಲ್ಲಿ ವಿಶ್ವದೆಲ್ಲೆಡೆ ಹಂಚಿಕೆಯಾಗುತ್ತದೆ.

ಡಾಕ್ಟರ್ ಸಮೀರ್ ಅವರು 16 ವರ್ಷಗಳಿಂದ ಗೈನಕಾಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.