ಉ.ಪ್ರದೇಶ: ನವಜಾತ ಶಿಶುವಿಗೆ ಕೊರೋನ

0
444

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕೊರೋನ ನೆಗೆಟಿವ್ ಯುವತಿಯೊಬ್ಬರು ಮಗುವಿಗೆ ಜನ್ಮನೀಡಿದ್ದು ನವಜಾತ ಶಿಶು ಕೊರೋನ ಪಾಸಿಟಿವ್ ಆಗಿದೆ. ಹೆರಿಗೆಯ ಮೊದಲು ಯುವತಿಗೆ ಕೊರೋನ ಟೆಸ್ಟ್ ಮಾಡಿಸಲಾಗಿತ್ತು. ಆದರೆ ಹೆರಿಗೆಯಾದ ನಂತರ ಮಗುವನ್ನು ಪರೀಕ್ಷಿಸಿದಾಗ ಕರೊನ ಪಾಸಿಟಿವ್ ಎಂದು ಕಂಡು ಬಂದಿದೆ.

ವಾರಣಾಸಿ ನಿವಾಸಿಯಾದ ಯುವತಿ ಮೇ 24ಕ್ಕೆ ಎಸ್‍ಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಕೊರೋನ ಪರೀಕ್ಷೆ ಮಾಡಿಸಲಾಗಿತ್ತು. ಫಲಿತಾಂಶ ನೆಗೆಟಿವ್ ಆಗಿತ್ತು. ಆರ್‍ಟಿಪಿಸಿಆರ್ ಸ್ಪಷ್ಟತೆಯ ಪ್ರಮಾಣ ಶೇ.70 ಆಗಿದ್ದು ಆದ್ದರಿಂದ ತಾಯಿಗೆ ಕೊರೋನ ಬಂದಿದ್ದು ಗೊತ್ತಾಗಿರಲಿಲ್ಲ. ಇನ್ನೊಂದು ಪರೀಕ್ಷೆ ಮಾಡಿಸಿ ನೋಡಲಾಗುವುದು ಎಂದು ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಡಾ.ಕೆ.ಕೆ. ಗುಪ್ತ ಹೇಳಿದರು. ಕೊರೋನ ಬಿಟ್ಟರೆ ತಾಯಿ ಮಗುವಿಗೆ ಬೇರೆ ಆರೋಗ್ಯ ಸಮಸ್ಯೆಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.