ಸನ್ಮಾರ್ಗ ವಾರ್ತೆ
ಕೊಣಾಜೆ: ಮಂಗಳೂರು ನಗರದ ಹೊರವಲಯದ
ಕೊಣಾಜೆ ಠಾಣಾ ವ್ಶಾಪ್ತಿಯ ಅಸೈಗೋಳಿಯಲ್ಲಿ ಅಳವಡಿಸಿದ್ದ ಅಂಬೇಡ್ಕರ್ ಜಯಂತಿ ಫ್ಲೆಕ್ಸ್ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಶರಣ್ (24) ಮತ್ತು ಸುಜಿತ್(26) ಎಂದು ಗುರುತಿಸಲಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯವೆಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.













