ಸೌದಿ: ಎರಡೂ ಪವಿತ್ರ ಮಸೀದಿಗಳಲ್ಲಿ ರಮಝಾನಿನ ಕೊನೆಯ ಹತ್ತುಗಳ ಇಅ್‌ತಿಕಾಫ್‌ಗೆ ಅನುಮತಿ; ಮಾರ್ಗಸೂಚಿ ಬಿಡುಗಡೆ

0
574

ಸನ್ಮಾರ್ಗ ವಾರ್ತೆ

ಸೌದಿ: ಈ ಬಾರಿಯ ರಮಝಾನ್ ನಲ್ಲಿ ಮಸ್ಜಿದುಲ್ ಹರಾಮ್ ಮತ್ತು ಮಸ್ಜಿದುನ್ನಬವಿ ಗಳಲ್ಲಿ ಇಅ್‌ತಿಕಾಫ್‌ಗೆ ಅನುಮತಿ ನೀಡಲಾಗುವುದು ಎಂದು ಸೌದಿ ತಿಳಿಸಿದೆ.

ವಿಶೇಷ ನಿಯಮಗಳಡಿಯಲ್ಲಿ ರಮಝಾನಿನ ಕೊನೆಯ ಹತ್ತರಲ್ಲಿ ಇಅ್‌ತಿಕಾಫ್‌ಗೆ ಕುಳಿತುಕೊಳ್ಳುವುದಕ್ಕೆ ಎರಡು ಹರಮ್‌ಗಳಲ್ಲಿ ಅವಕಾಶವನ್ನು ನೀಡಲಾಗುವುದು. ಇದಕ್ಕಾಗಿ ಹರಮ್‌ನ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಅನುಮತಿ ಪಡೆದುಕೊಳ್ಳಬೇಕು. ಮಸೀದಿಯಲ್ಲಿ ಸುರಕ್ಷಿತ ಅಂತರವನ್ನು ಪಾಲಿಸಬೇಕು, ಹರಮ್‌ಗಳಿಗೆ ಪ್ರವೇಶಿಸುವುದಕ್ಕೆ ಇಮ್ಯೂನ್ ಸ್ಟೇಟಸ್ ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ. ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿ ಇಅ್‌ತಿಕಾಫ್‌ಗೆ ಅನುಮತಿ ಲಭ್ಯವಾಗುತ್ತಿದೆ.