ರೈತರ ಹೋರಾಟದ ಜಾಗೃತಿಗಾಗಿ ಟೂಲ್‍ ಕಿಟ್ ತಯಾರಿಸಿದ್ದು ಪರಿಸರ ಗ್ರೂಪ್: ನಿಕಿತಾ ಜೇಕಬ್

0
317

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ ಬರ್ಗ್ ಗೆ ಟೂಲ್‍ಕಿಟ್ ಕೊಟ್ಟಿರುವುದು ತಾನಲ್ಲ. ಟೂಲ್‍ಕಿಟ್ ತಯಾರಿಸಿದ್ದು ತಾನು ಸದಸ್ಯೆಯಾಗಿರುವ ಪರಿಸರ ಗುಂಪು ಎಂದು ವಕೀಲೆ, ಪರಿಸರ ಕಾರ್ಯಕರ್ತೆ ನಿಕಿತಾ ಜೇಕಬ್ ಹೇಳಿಕೆ ನೀಡಿದ್ದಾರೆ. ಇದು ರೈತರ ಹೋರಾಟದ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಟೂಲ್ ಕಿಟ್ ತಯಾರಿಸಲಾಗಿತ್ತು ಎಂದು ಹೇಳಿದ್ದಾರೆ.

ಟೂಲ್ ಕಿಟ್ ಪ್ರಕರಣದಲ್ಲಿ ಮುಂಬೈ ಹೈಕೋರ್ಟ್ ನ ವಕೀಲೆ ನಿಕಿತಾ ಜೇಕಬ್ ಮತ್ತು ಶಾಂತನು ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ದಿಲ್ಲಿ ಪೊಲೀಸರ ಮನವಿ ಮೇರೆಗೆ ದಿಲ್ಲಿ ಹೈಕೋರ್ಟ್ ವಾರಂಟ್ ಹೊರಡಿಸಿತ್ತು. ಟೂಲ್ ಕಿಟ್ ಪ್ರಕರಣದಲ್ಲಿ 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿಯವರನ್ನು ಬಂಧಿಸಲಾದ ನಂತರ ನಿಕಿತಾರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ನಿಕಿತಾ ಮತ್ತು ಶಾಂತನು ಬಂಧನಕ್ಕೆ ದಿಲ್ಲಿ ಪೊಲೀಸರು ಮುಂಬೈಗೆ ಆಗಮಿಸಿದ್ದಾರೆ.

ಶಾಂತನು ಮುಕುಲ್‍ರ ಇಮೇಲ್ ಐಡಿ ಉಪಯೋಗಿಸಿ ಕಿಟ್ ತಯಾರಿಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ದಿಶಾ ನಿಕಿತಾ, ಶಾಂತನು ಸೇರಿ ಟೂಲ್ ಕಿಟ್ ತಯಾರಿಸಿದ್ದಾರೆ ಎಂದು ದಿಲ್ಲಿ ಪೊಲೀಸರು ಹೇಳುತ್ತಿದ್ದಾರೆ. ದಿಶಾ ರವಿ(21) ಫ್ರೈಡೆ ಫಾರ್ ಪ್ಯೂಚರ್ ಅಭಿಯಾನದ ಭಾರತದ ಸ್ಥಾಪಕ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದಾರೆ. ಟೂಲ್ ಕಿಟ್ ಗೂಗಲ್ ದಾಖಲೆಯಾಗಿದೆ. ರೈತ ಹೋರಾಟವನ್ನು ಬೆಂಬಲಿಸಿದ ಪರಿಸರ ಕಾರ್ಯಕರ್ತೆ ಗ್ರೇಟಾರ ಟೂಲ್ ಕಿಟ್ ವಿರುದ್ಧ ಫೆಬ್ರುವರಿ 4ರಂದು ಪೊಲೀಸರು ಕೇಸು ದಾಖಲಿಸಿದ್ದರು.