ಟೂಲ್‍ಕಿಟ್ ಪ್ರಕರಣದಲ್ಲಿ ಯಾವುದೇ ದೇಶದ್ರೋಹವಿಲ್ಲ: ಮಾಜಿ ಸುಪ್ರೀಂ ಕೋರ್ಟ್ ಜಡ್ಜ್ ದೀಪಕ್ ಗುಪ್ತ

0
462

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪರಿಸರ ಕಾರ್ಯಕರ್ತೆ ದಿಶಾ ರವಿಯವರ ಬಂಧನ ನಡೆದ ಟೂಲ್‍ಕಿಟ್ ಪ್ರಕರಣದಲ್ಲಿ ದೇಶದ್ರೋಹ ಆರೋಪ ಹೊರಿಸಲು ಸಾಧ್ಯವಿಲ್ಲ ಎಂದು ಮಾಜಿ ಸುಪ್ರೀಂ ಕೋರ್ಟ್ ಜಡ್ಜ್ ದೀಪಕ್ ಗುಪ್ತ ಹೇಳಿದರು. ದೇಶದ ಯಾವುದೇ ಪ್ರಜೆಗೂ ಸರಕಾರದ ವಿರುದ್ಧ ಪ್ರತಿಭಟನೆ ಮಾಡುವ ಹಕ್ಕಿದೆ. ಅದು ಶಾಂತಿಯುತವಾಗಿರುವಷ್ಟರವರೆಗೆ ಪ್ರತಿಭಟನೆಯ ವಿರುದ್ಧ ಕೇಸು ಹಾಕಲು ಆಗುವುದಿಲ್ಲ ಎಂದು ರಾಷ್‍ರೀಯ ಚ್ಯಾನೆಲ್‍ಗೆ ನೀಡಿದ ಸಂದರ್ಶನದಲ್ಲಿ ಜಸ್ಟಿಸ್ ದೀಪ್ ಗುಪ್ತ ಹೇಳಿದರು.

ದಿಶಾ ರವಿಯವರ ವಿರುದ್ಧದ ಪ್ರಕರಣವು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಾಗಿದೆ ಎಂದು ಗುಪ್ತ ಹೇಳಿದರು. ಸಾರ್ವಜನಿಕ ಕಡೆ ಲಭ್ಯವಾದ ಟೂಲ್‍ಕಿಟ್ ಅನ್ನು ತಾನು ಓದಿದೆ ಎಂದು ಅವರು ಹೇಳಿದರು. ಟೂಲ್‍ಕಿಟ್‍ನಲ್ಲಿ ಜನರನ್ನು ಅಕ್ರಮಕ್ಕೆ ಪ್ರೇರೇಪಿಸುವುದು ಏನೂ ಇಲ್ಲ. ಒಬ್ಬ ಪ್ರತಿಭಟನೆಯನ್ನು ಬೆಂಬಲಿಸಬಹುದು. ಬೆಂಬಲಿಸದಿರಬಹುದು. ಆದರೆ ಟೂಲ್ ಕಿಟ್ ಕೇಸಿನಲ್ಲಿ ದೇಶದ್ರೋಹ ಆರೋಪ ಅಜ್ಞಾನದಿಂದ ಹೊರಿಸಿದ್ದೆಂದು ದೀಪಕ್ ಗುಪ್ತ ಹೇಳಿದ್ದಾರೆ.

1862ರ ಕೇದಾರಸಿಂಗ್ ವರ್ಸರ್ಸ್ ಬಿಹಾರ ಸರಕಾರದ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಗಲಭೆಗೆ ಪ್ರೇರಣೆ, ಅಕ್ರಮ, ಸಾರ್ವಜನಿಕ ಜನಜೀವನಕ್ಕೆ ಭಂಗ ತಂದದ್ದಕ್ಕಾಗಿ ದೇಶದ್ರೋಹ ಆರೋಪ ಹೊರಿಸಲಾಗಿತ್ತು. ಆದರೆ ಟೂಲ್ ಕಿಟ್ ಪ್ರಕರಣದಲ್ಲಿ ಇಂತಹದು ಯಾವುದೂ ಬರುವುದಿಲ್ಲ ಎಂದು ಅವರು ಹೇಳಿದರು.

ರವಿವಾರ ಗ್ರೇಟ ಥನ್‍ಬರ್ಗ್ ಟೂಲ್‍ಕಿಟ್ ಪ್ರಕರಣದಲ್ಲಿ ಪರಿಸರ ಕಾರ್ಯಕರ್ತೆ 21 ವರ್ಷದ ದಿಶಾ ರವಿಯವರನ್ನು ಬೆಂಗಳೂರಿನಿಂದ ಬಂಧಿಸಿ ದಿಲ್ಲಿ ಪೊಲೀಸರು ಕರೆದೊಯ್ದಿದ್ದರು. ಬಳಿಕ ದಿಲ್ಲಿಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಐದು ದಿನದ ರಿಮಾಂಡ್ ವಿಧಿಸಲಾಗಿದೆ. ರೈತ ಹೋರಾಟವನ್ನು ಬೆಂಬಲಿಸಿದ ಗ್ರೇಟ ಥನ್‍ಬರ್ಗ್ ಸಹಿತ ದೇಶದ್ರೋಹ, ಭಾರತದ ವಿರುದ್ಧ ಸಂಚು , ಸಾಮುದಾಯಿಕ ಘರ್ಷಣೆಗೆ ಪ್ರೇರಣೆ, ಕ್ರಿಮಿನಲ್ ಸಂಚು ಹೆಣೆದ ಆರೋಪಗಳನ್ನು ಹೇರಿ ಕೇಸು ದಾಖಲಿಸಲಾಗಿದೆ.