ನಿಪ್ಹಾ: 61 ಜನರ ಪರೀಕ್ಷಾ ಫಲಿತಾಂಶ ನೆಗೆಟಿವ್: ನಿಪ್ಹಾದಿಂದ ನಿಧನಗೊಂಡ ಹಾರಿಸ್‍ರೊಂದಿಗೆ ಸಂಪರ್ಕವಿದ್ದ ವ್ಯಕ್ತಿಗೂ ಇಲ್ಲ ನಿಪ್ಹಾ

0
272

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್, ಸೆ.18: ಕೋಝಿಕ್ಕೋಡ್ ಜಿಲ್ಲೆಯಲ್ಲಿ ಇಂದು 61ಜನರ ಗಂಟಲ ರಸ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು ಎಲ್ಲವೂ ನೆಗೆಟಿವ್ ಆಗಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದರು.

ಇದರಲ್ಲಿ ಹೆಚ್ಚಿನ ಅಪಾಯದಲ್ಲಿರುವವರು ಮತ್ತು ಕೊನೆಯಲ್ಲಿ ರೋಗ ದೃಢಪಟ್ಟಿದ್ದ ಚೆರುವಣ್ಣೂರಿನ  ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರು ಇದರಲ್ಲಿ ಸೇರಿದ್ದಾರೆ. ಕಳೆದ ಹನ್ನೊಂದನೇ ತಾರೀಕಿಗೆ ಹಾರಿಸ್ ಎಂಬವರು ನಿಪ್ಹಾ ರೋಗಕ್ಕೆ ತುತ್ತಾಗಿ ಮೃತಪಟ್ಟಿದ್ದರು. ಇವರೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಯ ಗಂಟಲ ರಸ ಯಾನೆ ಲಾಲರಸ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.

ಆದ್ದರಿಂದ ನಿಪ್ಹಾ ವೈರಸ್ ಹೆಚ್ಚಿನ ವೇಗದಲ್ಲಿ ಹರಡಿಲ್ಲ ಎಂದು ಇದರಲ್ಲಿ ಗೊತ್ತಾಗುತ್ತಿದೆ. ಮಲಪ್ಪುರಂ ಜಿಲ್ಲೆಯಲ್ಲಿ 22 ಮಂದಿಯನ್ನು ನಿರೀಕ್ಷೆಗೆ ಗುರಿಪಡಿಸಲಾಗಿದ್ದು, ಐಸಿಯುನಲ್ಲಿದ್ದ ವ್ಯಕ್ತಿಯೊಂದಿಗೆ ಈ 22 ಮಂದಿ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಇವರಲ್ಲಿ ಹೆಚ್ಚಿನವರು ನಿಪ್ಹಾ ರೋಗಿಯನ್ನು ನೋಡಲು ಆಸ್ಪತ್ರೆಗೆ ಬಂದವರು ಎನ್ನಲಾಗಿದೆ. ನಿನ್ನೆ ಹದಿಮೂರು ಬಂದಿದ್ದು ಇವರ ಲಾಲರಸ ಪರೀಕ್ಷೆ ನಡೆಸಲಾಗುವುದು.

ಇಂದು ಕೇಂದ್ರ ತಂಡದೊಂದಿಗೆ ವಿಸ್ತೃತ ಚರ್ಚೆ ನಡೆಸಲಾಯಿತು. ಕೇರಳದ ನಿಪ್ಹಾ ತಡೆಗಟ್ಟುವ ಚಟುವಟಿಕೆಗಳ ಬಗ್ಗೆ ಕೇಂದ್ರದ ತಂಡ ತೃಪ್ತಿ ವ್ಯಕ್ತಪಡಿಸಿದೆ. ನಿಪ್ಹಾ ವರದಿಯ ನಂತರ ಪರಿಸ್ಥಿತಿಯನ್ನು ಅವಲೋಕಿಸಲು ಕೋಝಿಕ್ಕೋಡ್‌ಗೆ ಬಂದಿದ್ದ ಕೇಂದ್ರ ತಂಡದ ಒಂದು ವಿಭಾಗವು ಇಂದು ಮರಳಲಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದರು.