ಅನುಮತಿಯಿಲ್ಲದೆ ಭೂ ಖರೀದಿ ಅಥವಾ ವ್ಯಾಪಾರ ಮಾಡಬಾರದು: ಮ್ಯಾನ್ಮಾರ್ ನಿರಾಶ್ರಿತರಿಗೆ ಮಿಜೋರಾಂ ಸರ್ಕಾರದಿಂದ ನಿರ್ದೇಶನ

0
303

ಸನ್ಮಾರ್ಗ ವಾರ್ತೆ

ಐಜ್ವಾಲ್: ಮ್ಯಾನ್ಮಾರ್‌ನಿಂದ ಬಂದಿರುವ ನಿರಾಶ್ರಿತರಿಗೆ ಅನುಮತಿಯಿಲ್ಲದೆ ಭೂಮಿ ಖರೀದಿಸದಂತೆ ಅಥವಾ ವ್ಯಾಪಾರ ಮಾಡದಂತೆ ಮಿಜೋರಾಂ ಸರ್ಕಾರ ಸೂಚನೆ ನೀಡಿದೆ. ನಿರಾಶ್ರಿತರು ಮಿಜೋರಾಂನಲ್ಲಿ ಭೂಮಿ ಖರೀದಿಸಲು ಮತ್ತು ವ್ಯವಹಾರಗಳನ್ನು ತೆರೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ವರದಿಗಳ ನಂತರ ಸರ್ಕಾರವು ಹೊಸ ನಿರ್ದೇಶನವನ್ನು ನೀಡಿದೆ.

ನಿರಾಶ್ರಿತರಿಗೆ ಗುರುತಿನ ದಾಖಲೆಗಳನ್ನು ನೀಡಲು ರಾಜ್ಯ ಸರ್ಕಾರ ಪ್ರಾರಂಭಿಸಿದೆ, ಆದರೆ ಆಧಾರ್‌ನಲ್ಲಿ ಹೆಸರು ಸೇರಿಸುವುದನ್ನು ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದೇಶ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಮಿಜೋರಾಂ ಸರ್ಕಾರವು ಪ್ರಾದೇಶಿಕ ಆಡಳಿತಗಳಿಗೆ ನಿರ್ದೇಶನ ನೀಡಿದೆ.

ಅಧಿಕೃತ ದಾಖಲೆಗಳ ಪ್ರಕಾರ ಮಿಝೊರಂನಲ್ಲಿ 150 ಶಿಬಿರಗಳಲ್ಲಿ 30,000 ನಿರಾಶ್ರಿತರಿದ್ದಾರೆ. ಸ್ವದೇಶದಿಂದ ವಾಹನ ತರುವುದಕ್ಕೆ ಮಿಝೊರಂ ಸರಕಾರದ ಅನುಮತಿ ಪಡೆಯಬೇಕೆಂದು ಈ ಹಿಂದೆ ಐಜ್ವಾಲ್ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಮ್ಯಾನ್ಮಾರಿನಲ್ಲಿ 510 ಕಿಲೋ ಮೀಟರ್ ದೂರದಲ್ಲಿ ಮಿಝೋರಾಂ ಗಡಿ ಇದೆ. ಮ್ಯಾನ್ಮಾರಿನಿಂದ ನಿರಾಶ್ರಿತರಾಗಿ ಬಂದವರಲ್ಲಿ ಹೆಚ್ಚಿನವರು ರಾಜ್ಯ ಸರಕಾರದ ಸ್ಥಳೀಯಾಡಳಿತದ ಶಿಬಿರಗಳಲ್ಲಿ ನೆಲೆಸಿದ್ದಾರೆ. ಕೆಲವರು ತಮ್ಮ ಸಂಬಂಧಿಕರ ಮನೆಗಳಲ್ಲಿ ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುವವರೂ ಇದ್ದಾರೆ.