ಜಾತಿ ಆಧಾರಿತ ಮೀಸಲಾತಿ ಇಲ್ಲ, ಆರ್ಥಿಕ ಮೀಸಲಾತಿ ಮಾತ್ರ ಉಳಿಯಲಿದೆ: ಈ ವಿಷಯದಲ್ಲಿ ಸಂಸತ್ತು ಅಂತಿಮ ತೀರ್ಮಾನ ತಳೆಯಲಿ- ಸುಪ್ರೀಂ ಕೋರ್ಟ್

0
330

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದಲ್ಲಿ ಜಾತಿ ಆಧಾರಿತ ಮೀಸಲಾತಿ ಇಲ್ಲದಾಗಲಿದ್ದು ಆರ್ಥಿಕ ಆಧಾರಿತ ಮೀಸಲಾತಿ ಮಾತ್ರವೇ ಉಳಿಯಲಿದೆ ಎಂದು ಸುಪ್ರೀಂ ಕೋರ್ಟು ಹೇಳಿದೆ. ಈ ವಿಷಯದಲ್ಲಿ ಸಂಸತ್ತು ಅಂತಿಮ ತೀರ್ಮಾನ ತಳೆಯಬೇಕಾಗಿದೆ. ಇದು ಸರಕಾರದ ನೀತಿಯ ಅಂತಿಮ ತೀರ್ಮಾನವಾಗಲಿದೆ ಎಂದು ಕೋರ್ಟು ಹೇಳಿದೆ. ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಕಾನೂನನ್ನು ಪ್ರಶ್ನಿಸಿದ ಅರ್ಜಿಯಲ್ಲಿ ವಾದ ಆಲಿಸುವ ವೇಳೆ ಜಸ್ಟಿಸ್ ಅಶೋಕ್ ಭೂಷಣ್ ಅಧ್ಯಕ್ಷತೆಯ ಪೀಠ ಈ ಹೇಳಿಕೆ ನೀಡಿದೆ.

ಶೇ.50ರಷ್ಟು ಇದಕ್ಕಿಂತ ಹೆಚ್ಚು ಮೀಸಲಾತಿ ನೀಡಬಹುದೇ ಎಂದು ಸುಪ್ರೀಂ ಕೋರ್ಟಿನ ಸಂವಿಧಾನ ಪೀಠದ ಆಲಿಕೆ ಪೂರ್ಣವಾಗಿದ್ದು ಇಂದಿರಾ ಸಾಹ್ನಿ ಪ್ರಕರಣದ ತೀರ್ಪು ಪ್ರಕಾರ ಮೀಸಲಾತಿ ಶೇ.50ನ್ನು ಮೀರಲಾಗದು. ಇದರೊಂದಿಗೆ ಸುಪ್ರೀಂ ಕೋರ್ಟು ರಾಜ್ಯಗಳ ಅಭಿಪ್ರಾಯವನ್ನು ಕೇಳಿತ್ತು.

ಜಾತಿ ಆಧಾರದ ಮೀಸಲಾತಿ ರಾಜಕೀಕರಣಗೊಂಡಿದೆ ಎಂದು ವಕೀಲ ಶ್ರೀರಾಮ್ ಪಿಂಗಲೆ ವಾದಿಸಿದರು. ಇಂದಿರಾ ಸಾಹ್ನಿ ತೀರ್ಪಿನ ಆಧಾರದಲ್ಲಿ ಮೀಸಲಾತಿ ನಿಗದಿಯ ಘಟಕ ಜಾತಿಯಾಗಿ ಬದಲಾಯಿತು. ಇದು ಹಂತ ಹಂತವಾಗಿ ಬದಲಾಯಿಸಬೇಕೆಂದು ಪಿಂಗಳೆ ವಾದಿಸಿದರು. ನಂತರ ಸುಪ್ರೀಂ ಕೋರ್ಟು ಜಾತಿ ಮೀಸಲಾತಿ ಇಲ್ಲದಾಗಿ ಆರ್ಥಿಕ ಮೀಸಲಾತಿ ಮಾತ್ರ ಉಳಿಯುತ್ತದೆ ಎಂದು ಕೋರ್ಟು ಹೇಳಿದೆ.

ಮೀಸಲಾತಿ ವ್ಯಾಪ್ತಿ 50ಶೇಕಡಾ ಮೀರಬಾರದೆಂದಿರುವ ತೀರ್ಪಿನ ಮರುಪರಿಶೀಲನೆ ನಡೆಸಬೇಕೆಂದು ಹಲವು ರಾಜ್ಯಗಳು ಮನವಿ ಮಾಡಿಕೊಂಡಿವೆ.