ವ್ಯಾಕ್ಸಿನ್ ವಿರೋಧಿ ಪ್ರತಿಭಟನಾಕಾರರನ್ನು ಚದುರಿಸಲು ಸೇನೆಯನ್ನು ನಿಯೋಜಿಸುವ ಕುರಿತು ಚಿಂತಿಸಿಲ್ಲ- ಜಸ್ಟೀನ್ ಟ್ರುಡೊ

0
498

ಸನ್ಮಾರ್ಗ ವಾರ್ತೆ

ಒಟ್ಟಾವ: ವ್ಯಾಕ್ಸಿನ್ ವಿರೋಧಿ ಪ್ರತಿಭಟನಾಕಾರರ ಮೇಲೆ ಸೈನ್ಯವನ್ನು ಪ್ರಯೋಗಿಸುವ ಬಗ್ಗೆ ಈಗ ಆಲೋಚಿಸಿಲ್ಲ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದರು. ಒಟ್ಟಾವ ಡೌನ್‌ಟೌನ್‍ನಲ್ಲಿ ಒಟ್ಟು ಸೇರಿದ ಪ್ರತಿಭಟನಾಕಾರರನ್ನು ಅಲ್ಲಿಂದ ಎಬ್ಬಿಸಲು ಸೇನೆಯನ್ನು ಟ್ರುಡೊ ಬಳಸುತ್ತಾರೆ ಎಂಬುದಾಗಿ ವರದಿಯಾಗಿತ್ತು. ಆದರೆ ಈ ವರದಿಗಳನ್ನು ಟ್ರುಡೊ ನಿರಾಕರಿಸಿದ್ದಾರೆ.

ಸೇನೆಯ ಬಳಕೆಯ ವಿಚಾರ ಈಗ ಪರಿಗಣನೆಯಿಲ್ಲ. ಕೆನಡಾದ ಪ್ರಜೆಗಳ ಮೇಲೆ ಸೇನೆಯನ್ನು ಪ್ರಯೋಗಿಸುವ ವಿಷಯದಲ್ಲಿ ಸರಕಾರ ಅತ್ಯಂತ ಎಚ್ಚರಿಕೆ ವಹಿಸುತ್ತದೆ ಎಂದು ಟ್ರುಡೊ ಹೇಳಿದರು. ಒಟ್ಟಾವದ ಗಡಿಯಲ್ಲಿ ಬರುವ ಸರಕು ಲಾರಿ ಚಾಲಕರ ವ್ಯಾಕ್ಸಿನ್ ಕಡ್ಡಾಯಗೊಳಿಸಿದ ಬಳಿಕ ಪ್ರತಿಭಟನೆ ಸ್ಫೋಟವಾಗಿತ್ತು. ವ್ಯಾಕ್ಸಿನ್ ಆದೇಶ ಮತ್ತು ಇತರ ಕೊರೊನ ನಿಯಂತ್ರಣ ಹಿಂಪಡೆಯಬೇಕೆಂದು ಪ್ರತಿಭಟನೆಗಾರರು ಆಗ್ರಹಿಸುತ್ತಿದ್ದಾರೆ.

ಸಾವಿರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಕೆಲವರು ನಾಝಿ ಚಿಹ್ನೆ, ಪತಾಕೆ ಎತ್ತಿ ಹಿಡಿದಿದ್ದರು. ಶೇ.80ರಷ್ಟು ಕೊರೋನ ವ್ಯಾಕ್ಸಿನೇಶನ್ ಕೆನಡಾದಲ್ಲಿ ಆಗಿದೆ. ಹೀಗೆ ಕಡಿಮೆ ಸಂಖ್ಯೆ ಮಂದಿ ಪ್ರತಿಭಟಿಸುತ್ತಿದ್ದಾರೆ ಎಂದು ಸಮಾಜಿಕ ಮಾಧ್ಯಮದಲ್ಲಿ ಅಪಪ್ರಚಾರದ ಕಾರಣದಿಂದ ಇಂದಿನ ಈ ಪರಿಸ್ಥಿತಿ ಉಂಟಾಗಿದೆ ಎಂದು ಟ್ರುಡೊ ಹೇಳಿದ್ದರು. ಕೆನಡಾದಲ್ಲಿ ಪ್ರತಿಭಟನೆ ತೀವ್ರವಾದ ಮೇಲೆ ಟ್ರುಡೊ ಗುಪ್ತ ಸ್ಥಳಕ್ಕೆ ವಾಸ ಬದಲಾಯಿಸಿದ್ದಾರೆ ಎಂದೂ ವರದಿಯಾಗಿತ್ತು.