ಕಂಗನಾ ರಾಣಾವತ್ ಮನೆ ಕೆಡವಬೇಡಿ: ಬಾಂಬೆ ಹೈಕೋರ್ಟ್ ಆದೇಶ

0
364

ಸನ್ಮಾರ್ಗ ವಾರ್ತೆ

ಮುಂಬೈ: ಬಾಲಿವುಡ್ ನಟಿ ಕಂಗನಾ ರಾಣಾವತ್ ಮನೆ ಕೆಡವಬಾರದೆಂದು ಬಾಂಬ್ ಹೈಕೋರ್ಟು ಆದೇಶ ಹೊರಡಿಸಿದೆ. ಮನೆ ಕೆಡವುದಾಗಿ ಬ್ರಹನ್ಮುಂಬಯಿ ಕಾರ್ಪೊರೇಷನ್ ನೀಡಿದ ನೋಟಿಸನ್ನು ಹೈಕೋರ್ಟು ರದ್ದು ಪಡಿಸಿದೆ. ಕಂಗನಾರ ಮನೆಯನ್ನು ಸಕ್ರಮಗೊಳಿಸಬೇಕೆಂದು ಹೈಕೋರ್ಟು ಸೂಚಿಸಿದೆ. ಬಿಎಂಎಸಿ ಕೆಡವಿದ ಮನೆಯ ಭಾಗಗಳನ್ನು ಕಂಗನಾರಿಗೆ ಮರಳಿ ಕಟ್ಟಿಸಿಕೊಳ್ಳಬಹುದು. ಕಟ್ಟಡ ಕೆಡವಿದ ಕಾರಣದಿಂದ ಆಗಿರುವ ನಷ್ಟವನ್ನು ಲೆಕ್ಕ ಮಾಡಬೇಕೆಂದು ಕೋರ್ಟು ಆದೇಶ ಹೊರಡಿಸಿದೆ.

ಬಿಎಂಸಿ ಪೌರ ಹಕ್ಕು ಉಲ್ಲಂಘಿಸಿದೆ. ಮನೆ ಕೆಡವಲು ಕಾರ್ಪೊರೇಷನ್‍ಗೆ ಹಕ್ಕಿಲ್ಲ ಎಂದು ಕೋರ್ಟು ಹೇಳಿತು. ಕಳೆದ ಸೆಪ್ಟಂಬರಿನಲ್ಲಿ ಕಂಗನಾರ ಮನೆಯನ್ನು ಕೆಡವಲು ಬಿಎಂಸಿ ಆದೇಶ ಹೊರಡಿಸಿತ್ತು. ಮನೆಯ ಒಂದು ಭಾಗವನ್ನು ಕೆಡವಿ ಹಾಕಿತ್ತು. ನಂತರ ಕಂಗನಾ ಕೋರ್ಟಿನ ಮೊರೆ ಹೋಗಿದ್ದರು. ಕೆಡವುವ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.