ವಿನೇಶ್ ಪೊಗಟ್‍ರಿಗೆ ನಾಡಾದಿಂದ ನೋಟಿಸು

0
151

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜು.10: ಉತ್ತೇಜಕ ಮದ್ದು ತಪಾಸಣೆಯ ಕ್ರಮಾವಳಿಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ಭಾರತದ ಕುಸ್ತಿ ಪಟು ವಿನೇಶ್ ಪೊಗಟ್‍ರ ವಿರುದ್ಧ ದೇಶದ ಉತ್ತೇಜಕ ಮದ್ದು ಏಜೆನ್ಸಿ(ನಾಡ) ನೋಟಿಸು ಜಾರಿ ಮಾಡಿದೆ. ಎರಡು ವಾರದೊಳಗೆ ಉತ್ತರಿಸುವಂತೆ ವಿನೇಶ್‍ರಿಗೆ ಆದೇಶಿಸಲಾಗಿದೆ.

ಜೂನ್ 27ರಂದು ರಾತ್ರೆ ಹತ್ತು ಗಂಟೆಗೆ ಹರಿಯಾಣದ ಸೊನಿಪತ್‍ನಲ್ಲಿ ತಪಾಸಣೆಗೆ ಹಾಜರಿರಬೇಕೆಂದು ವಿನೇಶ್ ಪೊಗಟ್‍ರಿಗೆ ತಿಳಿಸಲಾಗಿತ್ತು ಎಂದು ತಿಳಿಸಿದ್ದು ಅಲ್ಲಿಗೆ ಅಧಿಕಾರಿ ಹೋದಾಗ ವಿನೇಶ್ ಪೊಗಟ್ ಅಲ್ಲಿರಲಿಲ್ಲ  ಎಂದು ನೋಟಿಸಿನಲ್ಲಿ ತಿಳಿಸಲಾಗಿದೆ. ಉತ್ತರ ನೀಡಲು ನಿರ್ಲಕ್ಷಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾದೀತೆಂದು ನಾಡಾ ಎಚ್ಚರಿಕೆ ನೀಡಿದೆ.

ವಿನೇಶ್ ಪೊಗಟ್ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿದ್ದು, ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‍ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ದಿಲ್ಲಿ ಜಂತರ್ ಮಂತರ್ ನಲ್ಲಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ತಾವು ಗೆದ್ದ ಪದಕಗಳನ್ನು ಗಂಗಾ ನದಿಗೆ ತೇಲಿ ಬಿಡುವುದಾಗಿ  ಪ್ರತಿಭಟನೆಯ ಭಾಗವಾಗಿ ಅವರ ಸಹಿತ ಪ್ರತಿಭಟನಾ ನಿರತ ಇತರ ಕುಸ್ತಿಪಟುಗಳು ಘೋಷಿಸಿದ್ದು ಅಂತಾರಾಷ್ಟ್ರೀಯ ವಿವಾದವಾಗಿತ್ತು.

ಇದೇ ವೇಳೆ ಗುರುವಾರ ಆರಂಭವಾದ ಬುಡಾಪೆಸ್ಟಿನ ರ್ಯಾಂಕಿಂಗ್ ಸಿರೀಸ್ 2023ರಲ್ಲಿ ವಿನೇಶ್ ಪೊಗಟ್ ಸ್ಪರ್ಧಿಸುತ್ತಿದ್ದಾರೆ. ಈ ಪಂದ್ಯಾಟ ಜುಲೈ 13ರಿಂದ 16ರ ವರೆಗೆ ನಡೆಯುತ್ತಿದೆ.