ಖರ್ಜೂರ ಹಣ್ಣಾಗಲೇ ಬೇಕು, ಇಲ್ಲಿ ಜೊತೆಗೆ ನಾವು ಕೂಡ ಬೇಯಲೇಬೇಕು.

0
218

ಸನ್ಮಾರ್ಗ ವಾರ್ತೆ

ಸಫ್ವಾನ್ ಕೂರತ್ ಫೇಸ್‌ಬುಕ್‌ ವಾಲ್ ನಿಂದ

ಜುಲೈ, ಅಗಸ್ಟ್ ತಿಂಗಳು ಬಂತೆಂದರೆ ಸಾಕು ಅರಬ್ ರಾಷ್ಟ್ರಗಳಲ್ಲಿ ಖರ್ಜೂರ ಹಣ್ಣುಗಳ ಪರ್ವ ಕಾಲ ಒಂಥರಾ ಊರಿನಲ್ಲಿ ಎಪ್ರಿಲ್ ಮೇ ತಿಂಗಳ ಮಾವಿನ ಹಣ್ಣುಗಳ ಸೀಸನ್ ರೀತಿ.

ಒಂದೇ ಮರದಲ್ಲಿ ಐದರಿಂದ ಏಳರವರೆಗೆ ಖರ್ಜೂರದ ಗೊನೆಗಳು ನೇತಾಡುತ್ತಿರುತ್ತವೆ. ಇಲ್ಲಿನ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಖರ್ಜೂರದ ಕಾಯಿಗಳು ಹಣ್ಣಾಗುತ್ತವೆ. ಹೀಗೆಯೇ ಸೆಪ್ಟೆಂಬರ್ ಕೊನೇಯವರೆಗೆ ಮುಂದುವರೆಯುತ್ತದೆ.

ಈಗ ಇಲ್ಲಿನ ಬಿಸಿಲಿನ ತಾಪ ವರದಿಯ ಪ್ರಕಾರ 50° ದಾಟಿಯಾಗಿದೆ. ನೀರಿನ ಬಿಸಿ ಅಂದ್ರೆ ನಿತ್ಯ ಬಳಕೆಗೆ ಕೈ ಅಂಡು, ಸುಟ್ಟುಕೊಳ್ಳುವಷ್ಟು ಬಿಸಿ ಇರುತ್ತೆ.

ಹೊರಭಾಗದಲ್ಲಿ ದುಡಿಯುವ ಕಾರ್ಮಿಕರಿಗೆ ಸಂಜೆ ಮೂರು ಗಂಟೆಯಿಂದ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲು ಸರ್ಕಾರ ಆಯಾ ಉಸ್ತುವಾರಿ ಸಂಸ್ಥೆಗಳಿಗೆ ಆದೇಶಿಸಿದೆ. ಬಿರು ಬಿಸಿಲಿಗೆ ಕಾರ್ಮಿಕರನ್ನು ದುಡಿಸಿದ್ದಲ್ಲಿ ದೊಡ್ಡ ಪ್ರಮಾಣದ ದಂಡವನ್ನೂ ವಿಧಿಸಲಾಗಿದೆ.

ಕೆಳಗೆ ಫೋಟೋ ದಲ್ಲಿ ಗಮನಿಸಿ ಖರ್ಜೂರದ ಗೊನೆಗಳಿಗೆ ಬಲೆಯಿಂದ ಕಟ್ಟಿ ಸಂರಕ್ಷಣೆ ಮಾಡಲಾಗಿದೆ. ಯುಎಇಯ ವಿವಿಧ ಸ್ಥಳಗಳಲ್ಲಿ ನಾನಿದನ್ನು ಗಮನಿಸಿದ್ದೇನೆ. ಉಳಿದ ಅರಬ್ ರಾಷ್ಟ್ರಗಳಲ್ಲಿ ಕೂಡ ಹೀಗೆಯೇ ಇರಬಹುದು.

ರಸ್ತೆಯ ಡಿವೈಡರ್, ಅಥವಾ ಬದಿಯಲ್ಲಿ ನೆಟ್ಟು ಬೆಳೆಸಿರುವ ಖರ್ಜೂರದ ಮರಗಳು ಸರ್ಕಾರ ಅಧೀನದಲ್ಲಿದೆ.
ಹಾಗಾಗಿ ಖರ್ಜೂರ ಕೆಳಗೆ ಬಿದ್ದು ಕೆಟ್ಟು ಹೋಗದಿರಲಿ ಎಂಬ ಉದ್ದೇಶದಿಂದ ಈ ರೀತಿ ಬಲೆಯಿಂದ ಸಂರಕ್ಷಿಸಿಡುತ್ತಾರೆ. ಇದನ್ನು ಯಾರಿಗೂ ಬೇಕಾದರೂ ಕೀಳಬಹುದು, ಯಾವುದೇ ಸಮಸ್ಯೆಗಳಿಲ್ಲ. ಉತ್ತಮ ಗುಣಮಟ್ಟ ತಳಿಯ ಖರ್ಜೂರಗಳು. ರಾತ್ರಿ ಶಿಫ್ಟ್ ಮುಗಿಸಿ ಬರ್ತಾ ನಾವು ಕೂಡ ಕೀಳಿಕೊಂಡು ಬರುವುದುಂಟು.

(ರಂಝಾನ್ ನಲ್ಲಿ ಇಫ್ತಾರ್ ಗೆ ಬಳಕೆ ಮಾಡುವ ಓಣ ಖರ್ಜೂರದ ಬಗ್ಗೆ ಈ ಹಿಂದೊಮ್ಮೆ ತಿಳಿಸಿದ್ದೆ.
ಹಸಿ ಖರ್ಜೂರ ವನ್ನು ಬೇಯಿಸಿಕೊಂಡು ನಂತರ ಬಿಸಿಲಿಗೆ ಒಣಗಲು ಹಾಕಿದ ನಂತರ ಒಣ ಖರ್ಜೂರವಾಗಿ ಮಾರ್ಪಡುತ್ತವೆ ಅಷ್ಟೇ..)

  • ಚಿಗುರೆಲೆ