ತರಕಾರಿ ರೇಟು ಹೆಚ್ಚಳಕ್ಕೆ ಮುಸ್ಲಿಮರು ಕಾರಣ: ಅಸ್ಸಾಂ ಮುಖ್ಯಮಂತ್ರಿ

0
435

ಸನ್ಮಾರ್ಗ ವಾರ್ತೆ

ಗುವಾಹಟಿ, ಜು.15: ರಾಜ್ಯದಲ್ಲಿ ತರಕಾರಿ ದರ ಹೆಚ್ಚಲು ಮಿಯ ಮುಸ್ಲಿಮರು ಕಾರಣ ಎಂದು ಅಸ್ಸಾಂ ಮುಖ್ಯಮಂತ್ರಿ ದೂಷಿಸಿದ್ದಾರೆ. ಅವರ ಹೇಳಿಕೆಗೆ ಎಲ್ಲ ಕಡೆಯಿಂದ ಬಲವಾದ ವಿರೋಧ ವ್ಯಕ್ತವಾಗಿದೆ.

ತರಕಾರಿಗೆ ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ರೇಟಿದೆ. ನಗರಗಳಲ್ಲಿ ಹೆಚ್ಚಾಗಿದೆ. ವ್ಯಾಪಾರಿಗಳು ನಗರದಲ್ಲಿ ತರಕಾರಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದ್ದಾರೆ. ನಗರದ ವ್ಯಾಪಾರಿಗಳಲ್ಲಿ ಬಹುಭಾಗ ಮಿಯ ಮುಸ್ಲಿಮರೇ ಆಗಿದ್ದಾರೆ ಎಂದು ತನ್ನ ಹೇಳಿಕೆಯನ್ನು ಅಸ್ಸಾಮ್ ಮುಖ್ಯಮಂತ್ರಿ ಹೇಮಂತ್ ಬಿಶ್ವ ಶರ್ಮ ಸಮರ್ಥಿಸಿಕೊಂಡಿದ್ದಾರೆ.

ಪೂರ್ವ ಬಂಗಾಳದಿಂದ ಬಂದಿರುವ ಮಿಯ ಮುಸ್ಲಿಮರು ಹೆಚ್ಚು ರೇಟನ್ನು ಅಸ್ಸಾಂ ಜನರಿಂದ ಪಡೆಯುತ್ತಿದ್ದಾರೆ. ಅವರೇ ಸ್ಥಳೀಯ ಮಾರುಕಟ್ಟೆಯ ನಿಂಯತ್ರಣ ಹೊಂದಿದ್ದಾರೆ. ಅಸ್ಸಾಂ ಯುವಕರು ತರಕಾರಿ ವ್ಯಾಪಾರ ಮಾಡುತ್ತಿದ್ದರೆ ಅವರಿಗೆ ಹೆಚ್ಚು ರೇಟು ನಿಗದಿಗೊಳಿಸಲು ಸಾಧ್ಯವಿರಲಿಲ್ಲ ಎಂದು ಬಿಶ್ವ ಶರ್ಮ ಹೇಳಿದ್ದಾರೆ.

ಅಸ್ಸಾಂ ಯುವಕರು ತರಕಾರಿ ವ್ಯಾಪಾರ ಶುರು ಮಾಡಿದರೆ ಮಿಯ ಮುಸ್ಲಿಮರಿಗೆ ಕಷ್ಟವಾಗಬಹುದು. ಟ್ಯಾಕ್ಸಿ ಚಾಲಕರು, ಬಸ್ ಚಾಲಕರಾಗಿ ಕೆಲಸ ಮಾಡುತ್ತಿರುವವರೆಲ್ಲರೂ ಮಿಯ ಮುಸ್ಲಿಮರು ಎಂದು ಅಸ್ಸಾಂ ಮುಖ್ಯಮಂತ್ರಿ ಹೇಳಿದರು.