ಮಣಿಪುರ: ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆಯಲು ನಿರ್ಧರಿಸಿದ ನಾಗಾ ಪೀಪಲ್ಸ್ ಫ್ರಂಟ್

0
611

ಇಂಫಾಲ,ಮೇ 20: ‘ನಮ್ಮನ್ನು ಬಿಜೆಪಿ ಕಡೆಗಣಿಸುತ್ತಿದೆ’ ಎಂದು ಆರೋಪಿಸಿ ನಾಗಾ ಪೀಪಲ್ಸ್ ಫ್ರಂಟ್(ಎನ್‍ಪಿಎಫ್) ಮಣಿಪ್ಪುರದ ಬಿಜೆಪಿ ಸರಕಾರದಿಂದ ಬೆಂಬಲವನ್ನು ಹಿಂಪಡೆಯಲು ನಿರ್ಧರಿಸಿದೆ. ಮೇ 23ಕ್ಕೆ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಿಗೆ ಬಿಜೆಪಿ ಸರಕಾರದಿಂದ ಅದು ಬೆಂಬಲ ಹಿಂಪಡೆಯಲಿದೆ.

ಆದರೆ ಕೇವಲ ನಾಲ್ಕು ಸದಸ್ಯರನ್ನೊಳಗೊಂಡ ಎನ್‍ಪಿಎಫ್ ಬೆಂಬಲ ವಾಪಸು ಪಡೆದರೆ ಸರಕಾರಕ್ಕೆ ಯಾವ ಹಾನಿಯೂ ಇಲ್ಲ. ಅರುವತ್ತು ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿಗೆ 29 ಮಂದಿ ಶಾಸಕರಿದ್ದಾರೆ. ಎಲ್‍ಜಿಪಿ, ಎಐಟಿಸಿ ಪಾರ್ಟಿಯ ತಲಾ ಒಬ್ಬರು ಶಾಸಕರು ಮತ್ತು ಪಕ್ಷೇತರರ ಬೆಂಬಲ ತಮಗಿದೆ ಎಂದು ಬಿಜೆಪಿ ಹೇಳಿದೆ. ಇದೇವೇಳೆ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಎನ್‍ಪಿಎಫ್ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ.