ಅರ್ಥವ್ಯವಸ್ಥೆಯನ್ನು ಅಂಧಕಾರದಲ್ಲಿಟ್ಟು ಬ್ಯಾಂಕ್ ವಿಲೀನ!

0
611

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಆ.31: ಕೇಂದ್ರ ಸರಕರ ಘೋಷಿಸಿದ ಬ್ಯಾಂಕ್ ವಿಲೀನ್ ಭಾರೀ ಪ್ರತ್ಯಾಘಾತ ಸೃಷ್ಟಿಸಬಹುದು ಎಂಬ ಅಭಿಪ್ರಾಯ ಕೇಳಿ ಬಂದಿದೆ. ವ್ಯಾಪಕವಾಗಿ ಶಾಖೆಗಳನ್ನು ಬಂದ್ ಮಾಡುವುದು ಸಾಮೂಹಿಕವಾಗಿ ಸ್ವಯಂ ನಿವೃತ್ತಿ ಪಡೆಯುವುದು ಬ್ಯಾಂಕಿನಲ್ಲಿ ಈಗ ಕೆಲಸ ಮಾಡುವವರನ್ನು ಮಾತ್ರ ಕಾಯುತ್ತಿಲ್ಲ. ಕೆಲಸಕ್ಕಾಗಿ ಕಾದು ನಿಂತಿರುವ ಯುವ ತಲೆಮಾರಿಗೂ ಹಾನಿಯಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅದರ ಅಸೊಸಿಯೇಟ್ಸ್ ಬ್ಯಾಂಕು ಭಾರತೀಯ ಮಹಿಳಾ ಬ್ಯಾಂಕ್ ವಿಲೀನ ಅಘಾತಕಾರಿಯಾಗಿದೆ. ಎರಡು ಸಾವಿರದಷ್ಟು ಶಾಖೆಗಳನ್ನು ಎಸ್‍ಬಿಐ ಬಂದ್ ಮಾಡಿದೆ. ಈ ತಿಂಗಳಲ್ಲಿ ಕೇರಳದಲ್ಲಿ 50 ಶಾಖೆಗಳನ್ನು ಮುಚ್ಚಲಾಯಿತು. ಮೂರು ಸಾವಿರ ಮಂದಿ ಸ್ವಯಂ ನಿವೃತ್ತಿ ಪಡೆದು ಕೆಲಸದಿಂದ ವಿರಮಿಸ ಬೇಕಾಯಿತು. ವಿಜಯ, ದೇನಾ ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನಗೊಂಡದ್ದರ ಆಘಾತ ಎಂತಹದ್ದೆಂದು ಇನ್ನಷ್ಟೇ ತಿಳಿಯಬೇಕಾಗಿದೆ. ಅಷ್ಟರಲ್ಲಿ ಇನ್ನೊಂದು ವಿಲೀನ.
ಬ್ಯಾಂಕ್‍ಗಳನ್ನು ವಿಲೀನಗೊಳಿಸುವಾಗ ಸಣ್ಣ ಫೈನಾನ್ಸ್ ಬ್ಯಾಕುಗಳನ್ನು, ಹೊಸ ಖಾಸಗಿ ಬ್ಯಾಂಕ್‍ಗಳನ್ನು ನೀಡಲಾಗುತ್ತಿದೆ ಎನ್ನುವ ವೈರುಧ್ಯಗಳು ಕಾಣಿಸಿಕೊಂಡಿದೆ.

ಬ್ಯಾಂಕ್ ನೌಕರರಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮೆಘಾ ಬ್ಯಾಂಕ್ ವಿಲೀನದಿಂದ ಬ್ಯಾಂಕಿಂಗ್ ಸ್ವಾತಂತ್ರ್ಯ ನಷ್ಟವಾಗಲಿದೆ. ಬ್ಯಾಂಕ್ ವಿಲೀನದ ಬಗ್ಗೆ ಬ್ಯಾಂಕ್ ನಿರ್ದೇಶಕರಿಂದ ವಿರೋಧದ ದೊಡ್ಡ ಧ್ವನಿ ಕೇಳಿಸುತ್ತಿಲ್ಲ. ರಿಸರ್ವ್ ಬ್ಯಾಂಕಿನ ಮೇಲೆಯೂ ಹಸ್ತಕ್ಷೇಪ ನಡೆದಿದೆ. ಒಟ್ಟಿನಲ್ಲಿ ಫಿನ್‍ಟೆಕ್(ಫೈನಾನ್ಶಿಯಲ್ ಟೆಕ್ನಾಲಜಿ ) ಅಂತಾರಾಷ್ಟ್ರೀಯ ಕಂಪೆನಿಗಳಿಗೆ ಬ್ಯಾಂಕಿಂಗ್-ಅರ್ಥವ್ಯವಸ್ಥೆಯನ್ನು ತೆರದು ಕೊಡಲಾಗುತ್ತಿದೆ ಎಂದಷ್ಟೇ ಆಲ್ ಇಂಡಿಯಾ ಬ್ಯಾಂಕ್ ಆಫಿಸರ್ಸ್ ಕಾನ್ಫಿಡರೇಶನ್‍ನ ಸೌಮ್ಯ ದತ್ತ ಹೇಳುತ್ತಿದ್ದಾರೆ.

ಆದರೆ, ಇಂದು ಕೇಂದ್ರ ಸರಕಾರದ ಬ್ಯಾಂಕ್ ವಿಲೀನವನ್ನು ವಿರೋಧಿಸಿ ದೇಶ ವ್ಯಾಪಕ ಬ್ಯಾಂಕ್ ಯೂನಿಯನ್‍ಗಳ ಒಕ್ಕೂಟ ಪ್ರತಿಭಟನೆ ಮಾಡಲು ನಿರ್ಧರಿಸಿದೆ. ಸಿಬ್ಬಂದಿ, ಅಧಿಕಾರಿ ಸಿಬ್ಬಂದಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಿದ್ದಾರೆ. ಆದರೆ ಬೃಹತ್ ವಿಲೀನದಲ್ಲಿ ಅಧಿಕಾರಿಗಳ ಸಾಮೂಹಿಕ ವರ್ಗಾವಣೆ ನಡೆಯಬಹುದು. ಶಾಖೆಗಳ ಕಡಿತ ಆಗಬಹುದು. ಸಾರ್ವಜನಿಕ ಕ್ಷೇತ್ರದ ಹತ್ತು ದೊಡ್ಡ ಬ್ಯಾಂಕ್‍ಗಳ ವಿಲೀನವನ್ನು ವಿತ್ತ ಸಚಿವೆ ಘೋಷಿಸಿದ ಬೆನ್ನಿಗಿರುವ ಪ್ರತ್ಯಾಘಾತಗಳು ಬಹಳಷ್ಟಿವೆ. ಇನ್ನು ದೇಶದಲ್ಲಿ ಹನ್ನೆರಡು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಮಾತ್ರ ದೇಶದಲ್ಲಿ ಇರಲಿವೆ.