ಉಮರ್ ಅಬ್ದುಲ್ಲ ಬಂಧನ: ಜಮ್ಮು ಕಾಶ್ಮೀರ ಸರಕಾರಕ್ಕೆ ಸುಪ್ರೀಂಕೋರ್ಟು ನೋಟಿಸು

0
849

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 14: ಸಾರ್ವಜನಿಕ ಸುರಕ್ಷಾ ಕಾನೂನು ಪ್ರಕಾರ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲರನ್ನು ಬಂಧನದಲ್ಲಿರಿಸಿದ್ದಕ್ಕೆ ಸುಪ್ರೀಂಕೋರ್ಟು ನೋಟಿಸು ಜಾರಿ ಮಾಡಿದೆ. ಉಮರ್ ಅಬ್ದುಲ್ಲರ ಬಂಧನದ ವಿರುದ್ಧ ಸಹೋದರಿ ಸಾರಾ ಅಬ್ದುಲ್ಲ ಸಲ್ಲಿಸಿದ ಅರ್ಜಿಯಲ್ಲಿ ಈ ಕ್ರಮ ಜರಗಿಸಲಾಗಿದೆ.

ಮಾರ್ಚ್ ಎರಡಕ್ಕೆ ಪ್ರಕರಣ ಪುನಃ ವಿಚಾರಣೆಗೆ ಬರಲಿದ್ದು ಪ್ರಕರಣದಲ್ಲಿ ಶೀಘ್ರ ವಿಚಾರಣೆ ನಡೆಸಬೇಕೆಂದು ವಕೀಲ ಕಪಿಲ್ ಸಿಬಲ್‍ರ ಆಗ್ರಹವನ್ನು ಸುಪ್ರೀಂಕೋರ್ಟು ತಿರಸ್ಕರಿಸಿದೆ. ಉಮರ್ ಅಬ್ದುಲ್ಲರನ್ನು ಶೀಘ್ರ ಕೋರ್ಟಿನಲ್ಲಿ ಹಾಜರುಪಡಿಸಬೇಕು. ಬಂಧನದಿಂದ ಬಿಡುಗಡೆಗೊಳಿಸಬೇಕೆಂದು ಸಹೋದರಿ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.

ಕಳೆದ ವರ್ಷ ಆಗಸ್ಟ್ ನಲ್ಲಿ ಉಮರ್ ಅಬ್ದುಲ್ಲರನ್ನು ಬಂಧಿಸಿಡಲಾಗಿದೆ. ಅವರ ವಿರುದ್ಧ ಕಠಿಣ ಕಾನೂನು ಹೇರಲ್ಪಟ್ಟಿದೆ.