ಸನ್ಮಾರ್ಗ ವಾರ್ತೆ-
ಚೆನ್ನೈ, ಡಿ.10: ವಿದೇಶಗಳಿಂದ ಈರುಳ್ಳಿ ಬರಲು ತೊಡಗಿದ್ದು ತಮಿಳ್ನಾಡಿನಲ್ಲಿ ಈರುಳ್ಳಿ ದರ ಕಡಿಮೆಯಾಗಿದೆ. ತಮಿಳ್ನಾಡು, ಆಂದ್ರದಲ್ಲಿ ಬೆಲೆ ಕಡಿಮೆಯಾಗಿದ್ದು ಸೋಮವಾರ ಈಜಿಪ್ಟ್ ನಿಂದ ತಿರುಚ್ಚಿ ಸಹಿತ ವಿವಿಧ ನಗರಗಳಿಗೆ ಸಗಟು ಮಾರುಕಟ್ಟೆ ಟನ್ನುಗಟ್ಟಲೆ ಈರುಳ್ಳಿ ಬಂದಿದೆ.
ನಾಸಿಕ್ನಿಂದಲೂ ಈರುಳ್ಳಿ ಲೋಡುಗಳು ಬಂದಿವೆ. ತಿರುಚ್ಚಿಯಲ್ಲಿ ಈರುಳ್ಳಿ ನೂರು ರೂಪಾಯಿಗಿಳಿಕೆಯಾಗಿದೆ. ಬೆಲೆ ಕಡಿಮೆಯಾದ್ದರಿಂದ ಸಂತೆ ವ್ಯಾಪಾರ ಕಡಿಮೆಯೂ ಆಗಿದೆ. ಒಂದೇ ಏಟಿಗೆ 20ರಿಂದ 30 ರೂಪಾಯಿ ಕಡಿಮೆ ಆಗಿದ್ದು ವ್ಯಾಪಾರಿಗಳಿಗೆ ಕಷ್ಟಕ್ಕೂ ಕಾರಣವಾಗಿದೆ. ಸಣ್ಣ ವ್ಯಾಪಾರಿಗಳು ಈರುಳ್ಳಿ ಖರೀದಿಸಲು ಹೆದರುತ್ತಿದ್ದಾರೆ. ಬೆಲೆ ಇನ್ನೂ ಕಡಿಮೆಯಾಗುವ ಸಾಧ್ಯತೆ ಕಂಡು ಬರುತ್ತಿದ್ದು ಒಂದು ಹಂತದಲ್ಲಿ ಈರುಳ್ಳಿ ಕಿಲೊ ಒಂದಕ್ಕೆ 200 ರೂಪಾಯಿ ದಾಟಿತ್ತು. ಈಗ ನೂರೈವತ್ತು ರೂಪಾಯಿ, ಬೆಳ್ಳುಳ್ಳಿಗೆ ನೂರ ಅರುವತ್ತು ರೂಪಾಯಿ ಇದೆ. ತಮಿಳ್ನಾಡಿನಲ್ಲಿ ಈರುಳ್ಳಿ ಕಟಾವ್ ಆರಂಭವಾಗುವುದರೊಂದಿಗೆ ಈರುಳ್ಳಿ ಬೆಲೆ ಹಂತಹಂತವಾಗಿ ಕಡಿಮೆಯಾಗುವುದು ಎಂದು ಮುಖ್ಯಮಂತ್ರಿ ಎಡಪ್ಪಳ್ಳಿ ಪಳನಿ ಸ್ವಾಮಿ ಸೋಮವಾರ ಕೋಯಮತ್ತೂರಿನಲ್ಲಿ ಹೇಳಿದ್ದರು.












