ಐಸಿಸ್ ಸಂಬಂಧ ಇರುವ 11 ಫ್ರಾನ್ಸ್ ನಾಗರಿಕರ ಗಡಿಪಾರು

0
708

ಸನ್ಮಾರ್ಗ ವಾರ್ತೆ-

ಅಂಕಾರ, ಡಿ. 10: ಐಸಿಸ್ ನೊಂದಿಗೆ ಸಂಬಂಧ ಇರಿಸಿಕೊಂಡಿದ್ದಾರೆನ್ನಲಾದ ಹನ್ನೊಂದು ಮಂದಿ ಫ್ರಾನ್ಸ್ ಪ್ರಜೆಗಳನ್ನು ಟರ್ಕಿ ಗಡಿಪಾರು ಮಾಡಿದೆ. ಸೋಮವಾರ ಟರ್ಕಿ ಗೃಹ ಸಚಿವಾಲಯ ಹೇಳಿಕೆ ನೀಡಿ ಸ್ಪಷ್ಟಪಡಿಸಿದೆ. ಆದರೆ ಇವರ ಕುರಿತು ವಿವರಗಳನ್ನು ಟರ್ಕಿ ಬಹಿರಂಗಪಡಿಸಿಲ್ಲ.

1200 ಐಸಿಸ್ ಸದಸ್ಯರು ತಮ್ಮ ಕಸ್ಟಡಿಯಲ್ಲಿದ್ದಾರೆಂದು ಟರ್ಕಿ ಹೇಳುತ್ತಿದೆ. ಟರ್ಕಿ, ಸಿರಿಯದ ಜೈಲಿನಲ್ಲಿರುವ ವಿದೇಶ ಐಸಿಸ್ ಪ್ರಜೆಗಳನ್ನು ಅವರ ಊರಿಗೆ ಮರಳುವಂತೆ ಕಳೆದ ತಿಂಗಳು ಟರ್ಕಿ ಆಗ್ರಹಿಸಿತ್ತು. ವಿದೇಶಿ ಹೋರಾಟಗಾರರಿಗೆ ವಾಸಿಸುವ ಸ್ಥಳ ಟರ್ಕಿಯಲ್ಲ ಎಂದು ಸರಕಾರ ತಿಳಿಸಿದೆ.