ಆನ್‌ಲೈನ್ ಜಾಬ್; ಮೋಸ ಹೋದ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಯುವಕರು

0
279

ಸನ್ಮಾರ್ಗ ವಾರ್ತೆ

ಆನ್‌ಲೈನ್ ವಂಚನೆಯ ಬಗ್ಗೆ ಪೊಲೀಸ್ ಇಲಾಖೆ ಪದೇ ಪದೇ ಎಚ್ಚರಿಸುತ್ತಿದ್ದರೂ ನಾಗರಿಕರು ವಂಚನೆಗೆ ಬಲಿಯಾಗುತ್ತಲೇ ಇದ್ದಾರೆ. ಮಂಗಳೂರಿನಲ್ಲಿ ಬೇರೆ ಬೇರೆ ಪ್ರಕರಣದಲ್ಲಿ ನಾಲ್ಕು ಮಂದಿ ಹೀಗೆ ಆನ್‌ಲೈನ್ ಮೋಸಕ್ಕೆ ಬಲಿಯಾಗಿರುವುದು ವರದಿಯಾಗಿದೆ.

ಒಂದು ಪ್ರಕರಣದಲ್ಲಿ ವ್ಯಕ್ತಿಯೋರ್ವ 22 ಲಕ್ಷದ 11 ಸಾವಿರ ರೂಪಾಯಿ ವಂಚಿಸಿದ್ದಾನೆ. ಬೆಂಗಳೂರಿನಲ್ಲಿ ಕೆಲಸ ತೆಗೆಸಿ ಕೊಡುವುದಾಗಿ ನಂಬಿಸಿ ಈ ವಂಚನೆಯ ಎಸಗಿದ್ದಾನೆ.. ವಿನಯ್ ಎಂಬ ವ್ಯಕ್ತಿ ವಂಚಕನಾಗಿದ್ದು, ಬೆಂಗಳೂರಿನ ಪ್ರಮುಖ ಕಂಪನಿಯಲ್ಲಿ ಕೆಲಸ ದೊರಕಿಸಿ ಕೊಡುವುದಾಗಿ ಹೇಳಿದ್ದಾನೆ. ಆತನ ಮಾತನ್ನು ನಂಬಿದ ಈ ವ್ಯಕ್ತಿ ಆತನಿಗೆ ತನ್ನ ಅಕೌಂಟಿನಿಂದ ವಿವಿಧ ಸಂದರ್ಭದಲ್ಲಿ 22 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ಟ್ರಾನ್ಸ್‌ಫರ್ ಮಾಡಿದ್ದಾನೆ.

ಇನ್ನೊಂದು ಪ್ರಕರಣವೂ ಉದ್ಯೋಗ ವಂಚನೆಯದ್ದೇ ಆಗಿದ್ದು ವ್ಯಕ್ತಿಯೊಬ್ಬ ಎರಡು ಲಕ್ಷದಷ್ಟು ಹಣವನ್ನು ಕಳಕೊಂಡಿದ್ದಾನೆ. ಇನ್ನೋರ್ವ ವ್ಯಕ್ತಿ ವಾಟ್ಸಾಪ್ ಮೆಸೇಜನ್ನು ನಂಬಿ ವಂಚನೆಗೆ ಒಳಗಾಗಿದ್ದಾನೆ. ಕರೆಂಟ್ ಬಿಲ್ ಕಟ್ಟಿಲ್ಲ ಎಂದು ಹೇಳಿ ವಂಚನೆಗೆ ಒಳಗಾಗಿ 71,000 ಕಳ್ಕೊಂಡಿದ್ದಾನೆ. ಮತ್ತೊರ್ವ ವ್ಯಕ್ತಿ ಮನೆ ಬಾಡಿಗೆಯ ಹೆಸರಲ್ಲಿ ಸುಮಾರು ಒಂದು ಲಕ್ಷದಷ್ಟು ಹಣವನ್ನು ಕಳುಹಿಸಿಕೊಟ್ಟು ವಂಚನೆಗೆ ಒಳಗಾಗಿದ್ದಾನೆ.

ಈ ಎಲ್ಲ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದ್ದು ದೂರು ದಾಖಲಾಗಿದೆ.