ಅನಿವಾಸಿ ಭಾರತೀಯರ ನಿದ್ದೆಗೆಡಿಸಿದ ಯುಎಇ – ಭಾರತ ವಿಮಾನ ದರ

0
236

ಸನ್ಮಾರ್ಗ ವಾರ್ತೆ

ಈದುಲ್ ಅಝ್ ಹಾ ಮತ್ತು ಶೈಕ್ಷಣಿಕ ರಜಾವಧಿ ಆಗಮಿಸುತ್ತಿರುವಂತೆಯೇ ಯುಎಇ ಯಿಂದ ಭಾರತಕ್ಕೆ ಹೊರಡುವ ವಿಮಾನಗಳ ದರ ಹೆಚ್ಚಳವಾಗಿದೆ. ಜೂನ್ ಕೊನೆಯಲ್ಲಿ ಈದುಲ್ ಅಝ್ ಹಾ ರಜೆ ಮತ್ತು ಜುಲೈ ಮೊದಲ ವಾರದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ರಜೆ ಆರಂಭವಾಗುತ್ತದೆ.

ಜೂನ್ 28ರಂದು ಈದುಲ್ ಅಝಆ ಆಗುವ ಸಾಧ್ಯತೆಯಿದ್ದು, ಯುಎಇ ಒಂದು ವಾರ ರಜೆಯನ್ನ ಘೋಷಿಸಲಿದೆ. ಜೂನ್ 26ರಂದು ರಜಾ ದಿನ ಅಲ್ಲದಿದ್ದರೂ ಆ ದಿವಸ ರಜೆಯನ್ನು ಪಡೆದುಕೊಂಡು ಜೂನ್ 23 ಅಥವಾ 24ರಂದು ಊರಿಗೆ ಮರಳಲು ಅನಿವಾಸಿ ಕನ್ನಡಿಗರು ಲೆಕ್ಕ ಹಾಕುತಿದ್ದಾರೆ.

ಆದರೆ ಜೂನ್ 24 ರಿಂದಲೇ ವಿಮಾನಯಾನ ಸಂಸ್ಥೆಗಳು ತಮ್ಮ ದರವನ್ನು ಭಾರಿ ಮಟ್ಟದಲ್ಲಿ ಏರಿಸಿರುವುದು ಅನಿವಾಸಿ ಭಾರತೀಯರ ನಿದ್ದೆಗೆಡಿಸಿದೆ