ಲಾಕ್‌ಡೌನ್ ಕುರಿತು ವ್ಯಂಗ್ಯವಾಡಿದ ಶಿವಸೇನಾ ನಾಯಕ ಸಂಜಯ್ ರಾವುತ್: ಅಂತ್ಯಕ್ರಿಯೆಗೆ 20ಮಂದಿ ಹೋದರೆ, ಮದ್ಯದಂಗಡಿ ಎದುರು ಸಾವಿರಾರು ಜನರು ಕ್ಯೂ ನಿಲ್ಲಬಹುದೇ?

0
806

ಸನ್ಮಾರ್ಗ ವಾರ್ತೆ

ಮುಂಬೈ,ಮೇ.9: ಶಿವಸೇನಾ ಸಂಸದ ಸಂಜಯ್ ರೌವುತ್ ರವರು ಲಾಕ್ ಡೌನ್ ನಲ್ಲಿ ಕೇಂದ್ರ ಸರಕಾರ ಮದ್ಯ ಮಾರಾಟಕ್ಕೆ ನೀಡಿದ ವಿನಾಯಿತಿಯನ್ನು ಪ್ರಶ್ನಿಸಿದ್ದಾರೆ. ಅಂತಿಮ ಸಂಸ್ಕಾರಕ್ಕೆ ಹೋಗಲು ಕೇವಲ 20 ಜನರಿಗೆ ಮಾತ್ರ ಅವಕಾಶವಿದೆ.ಆದರೆ, ಸಾವಿರಾರು ಜನರು ನೂಕು ನುಗ್ಗಲು ಮಾಡಿಕೊಂಡು ಸಾಮಾಜಿಕ ಅಂತರವಿಲ್ಲದೇ ಮದ್ಯದಂಗಡಿ‌ ಎದುರು ಒಟ್ಟುಗೂಡಬಹುದೇ? ಎಂದು ರಾವುತ್ ವ್ಯಂಗ್ಯಾತ್ಮಕ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

“ಮೃತ ದೇಹಗಳಲ್ಲಿ ಆತ್ಮ (spirit) ಇಲ್ಲ ಮತ್ತು ಅಂಗಡಿಗಳಲ್ಲಿ ಆತ್ಮ (spirit, ಮದ್ಯ) ಇದೆ ಅದಕ್ಕಾಗಿಯೇ ಹೆಚ್ಚಿನ ಜನರಿಗೆ ರಿಯಾಯಿತಿ ನೀಡಲಾಗುತ್ತಿದೆಯೇ?” ಎಂದು ರಾವುತ್ ಟ್ವೀಟ್ ಮಾಡಿದ್ದಾರೆ.

 

ಮೇ 5 ರಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲ್ ಶ್ರೀವಾಸ್ತವ ಅವರು ಸಾಮಾಜಿಕ ದೂರವಿರಲು ಮಾರ್ಗಸೂಚಿಗಳನ್ನು ನೀಡಿದರು. ವಿವಾಹ ಸಮಾರಂಭದಲ್ಲಿ 50 ಕ್ಕೂ ಹೆಚ್ಚು ಜನರು ಸೇರಲು ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ. ಅದೇ ಸಮಯದಲ್ಲಿ, 20 ಕ್ಕೂ ಹೆಚ್ಚು ಜನರಿಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ ಎಂದೂ ನಿರ್ದೇಶನ ನೀಡಲಾಗಿದೆ.

ಆದರೆ, ಮದ್ಯದಂಗಡಿಗಳ ಮುಂದೆ ಸಾವಿರಾರು ಜನರು ನೂಕು ನಗ್ಗಲು ಮಾಡಿ ಸಾರಾಯಿ ಖರೀದಿಸುತ್ತಿರುವುದನ್ನು ಕಾಣುವಾಗ ಸರಕಾರ ಏಕೆ ಇದಕ್ಕೆ ಅನುಮತಿ ನೀಡುತ್ತಿದೆ ಎಂಬ ಪ್ರಶ್ನೆಯನ್ನು ಹಲವರು ಸರಕಾರವನ್ನು ಟೀಕಿಸಿದ್ದು ಇದೀಗ ರಾವುತ್ ರವರ ಟ್ವೀಟ್ ವೈರಲ್ ಆಗಿದೆ.