ಶಿಯಾ ವಿದ್ವಾಂಸ ಮೌಲಾನ ಡಾ.ಕಲ್ಬೆ ಸಾದಿಕ್ ನಿಧನ

0
543

ಸನ್ಮಾರ್ಗ ವಾರ್ತೆ

ಲಕ್ನೊ,ನ.25: ದೇಶದ ಪ್ರಮುಖ ಶಿಯಾ ವಿದ್ವಾಂಸ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಲಿ ಉಪಾಧ್ಯಕ್ಷರಾದ ಮೌಲಾನ ಡಾ.ಕಲ್ಬೆ ಸಾದಿಕ್(83) ನಿಧನರಾದರು. ಕ್ಯಾನ್ಸರ್ ಪೀಡಿತರಾಗಿದ್ದ ಅವರಲ್ಲಿ ನ್ಯೂಮೊನಿಯ ಕಂಡು ಬಂದ ಬಳಿಕ ಉಸಿರಾಟ ತೊಂದರೆಯಾಗಿತ್ತು. ಈ ತಿಂಗಳು ಹದಿನೇಳಕ್ಕೆ ಲಕ್ನೊದ ಇರಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಅವರು ಅಖಿಲ ಭಾರತ ಶಿಯಾ ಕಾನ್ಫರೆನ್ಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಶಿಯಾ-ಸುನ್ನಿ ಒಗ್ಗಟಿಗೂ, ಹಿಂದೂ ಮುಸ್ಲಿಂ ಸೌಹಾರ್ದಕ್ಕೂ ಕಠಿಣವಾಗಿ ಪ್ರಯತ್ನಿಸಿದ್ದಾರೆ.

ಲಕ್ನೊದಲ್ಲಿ 1939ರಲ್ಲಿ ಜನಿಸಿದ್ದ ಅವರು ಸುಲ್ತಾನುಲ್ ಮದಾರಿಸ್, ಅಲೀಗಡ್ ಮುಸ್ಲಿಂ ಯುನಿವರ್ಸಿಟಿಗಳಲ್ಲಿ ವ್ಯಾಸಂಗ ಮಾಡಿದರು. ಅರಬಿ ಭಾಷೆಯಲ್ಲಿ ಡಾಕ್ಟರೇಟ್ ಗಳಿಸಿದರು. 1984ರಲ್ಲಿ ಲಕ್ನೊದಲ್ಲಿ ಆರಂಭವಾದ ತೌಹೀದುಲ್ ಮುಸ್ಲಿಮೀನ್ ಟ್ರಸ್ಟ್‌ನ ಅಧೀನದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಬಡವರಿಗೆ ಉಚಿತ ವಿದ್ಯಾಭ್ಯಾಸವನ್ನು ಕಡಿಮೆ ದರದಲ್ಲಿ ರೋಗಕ್ಕೆ ಚಿಕಿತ್ಸೆಯನ್ನು ನೀಡಿ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕಲ್ಬೆ ಸಾದಿಕ್ ಶ್ರದ್ಧೆಗೆ ಪಾತ್ರರಾಗಿದ್ದಾರೆ.