ಆಂಧ್ರದಲ್ಲಿ ನಟ ಚಿರಂಜೀವಿಯಿಂದ ಆಕ್ಸಿಜನ್ ವಿತರಣೆ

0
391

ಸನ್ಮಾರ್ಗ ವಾರ್ತೆ

ಚೆನ್ನೈ: ಕೊರೋನ ರೋಗಿಗಳ ಸಹಾಯಕ್ಕಾಗಿ ಮೆಗಾ ಸ್ಟಾರ್ ಚಿರಂಜೀವಿಯ ನೇತೃತ್ವದಲ್ಲಿ ನಾಳೆಯಿಂದ ಆಂಧ್ರದಲ್ಲಿ ಆಕ್ಸಿಜನ್ ವಿತರಣೆ ಆರಂಭವಾಗಲಿದೆ. ಆಕ್ಸಿಜನ್ ಸಿಲೆಂಡರ್‌ಗಳಲ್ಲದೇ, ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ರೋಗಿಗಳಿಗೆ ಹಲವಾರು ಸಹಾಯವನ್ನು ಒದಗಿಸಲಾಗುತ್ತಿದೆ. ಆಕ್ಸಿಜನ್ ಬ್ಯಾಂಕ್‍ಗಳ ಕೆಲಸದ ಮೇಲೆ ಪುತ್ರ ರಾಮ್ ಚರಣ್ ಮೇಲುಸ್ತುವಾರಿ ವಹಿಸಲಿದ್ದಾರೆ.

ಬುಧವಾರದಿಂದ ಆಕ್ಸಿಜನ್ ಸಿಲೆಂಡರ್‌ ಗಳನ್ನು ಅನಂತಪುರಂ ಗುಂಟೂರ್ ಮೆಡಿಕಲ್ ಸೆಂಟರ್‌ಗಳಿಗೆ ತಲುಪಿಸಲಾಗಿದೆ. ಗುರುವಾರ ಕಮ್ಮಂ, ಕರೀಂನಗರ ಮೊದಲಾದ ಐದು ಜಿಲ್ಲೆಗಳ ಜನರಿಗೆ ಸಿಗಲಿದೆ. ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ಅಧಿಕೃತ ಟ್ವಿಟರ್‌ನಲ್ಲಿ ಚಿರಂಜೀವಿ ದೌತ್ಯ ಆರಂಭಿಸುತ್ತೇವೆ. ಜೀವ ರಕ್ಷಕ ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಬಾರದೆಂದು ಅವರು ಬರೆದುಕೊಂಡಿದ್ದಾರೆ.

ಕಳೆದ ವರ್ಷ ಚಿರಂಜೀವಿ ಕೊರೋನ ಕ್ರೈಸಿಸ್ ಚಾರಿಟಿ ಸ್ಥಾಪಿಸಿದ್ದರು. ಅದರ ಮೂಲಕ ದಿನಕೂಲಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೆರವು ನೀಡಿದರು. ಪೌಂಡೇಶನ್ ಮೂಲಕ ಅವರು ಅಕ್ಕಿ ಇತರ ಅಗತ್ಯ ಸಾಮಾನುಗಳನ್ನು ಕೊಡುತ್ತಿದ್ದಾರೆ. ಎಪ್ರಿಲ್ ತಿಂಗಳಲ್ಲಿ ತೆಲುಗು ಚಲನಚಿತ್ರ ಕೆಲಸಗಾರರಿಗೆ ಫಿಲಂ ಜರ್ನಲಿಸ್ಟ್‌ಗಳಿಗೆ ಉಚಿತ ವ್ಯಾಕ್ಸಿನ್‍ಅನ್ನು ಘೋಷಿಸಿದ್ದರು.