ನದಿ ಪ್ರವಾಸಕ್ಕೆ ಇಪ್ಪತ್ತು ಲಕ್ಷ ರೂಪಾಯಿ ಏನಿದು?

0
136

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಉತ್ತರಪ್ರದೇಶದ ವಾರಣಾಸಿಯಲ್ಲಿ ಜಗತ್ತಿನಲ್ಲಿ ಅತ್ಯಂತ ದೂರದ ನದಿ ಪ್ರಯಾಣವನ್ನು ಪ್ರಧಾನಿ ನರೇಂದ್ರ ಮೋದಿ  ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಎಂವಿ ಗಂಗಾ ವಿಲಾಸ್ ಎಂಬ ಅದ್ದೂರಿ ನೌಕೆಯಲ್ಲಿ ವಾರಣಾಸಿಯಿಂದ ಬಾಂಗ್ಲಾದೇಶದ ಮೂಲಕ ಅಸ್ಸಾಮಿನ ದಿಬ್ರುಗಡಕ್ಕೆ ಹೋಗಬಹುದು. ಮೊದಲ ಪ್ರಯಾಣದಲ್ಲಿ 32 ಸ್ವಿಸ್ ಪ್ರವಾಸಿಗಳು ಇದ್ದಾರೆ. ಈ ಪ್ರವಾಸ 51 ದಿನಗಳದ್ದು, 3200 ಕಿಲೊಮೀಟರ್ ದೂರ ಹಡಗು ಸಂಚರಿಸುತ್ತದೆ. ಮೊದಲ ಪ್ರವಾಸಿಗರಾದ ಸ್ವಿಸ್ ಪ್ರಜೆಗಳನ್ನು ಶಹನಾಯಿ ಊದಿ ಹಾರ ಹಾಕಿ  ಸ್ವೀಕರಿಸಲಾಗುತ್ತದೆ.

ಫೈವ್ ಸ್ಟಾರ್ ಮೂವಿಂಗ್ ಹೊಟೇಲು. 36 ಮಂದಿಯ ಹದಿನೆಂಟು ಸ್ಯೂಟ್‍ಗಳು ಇವೆ ಎಂದು ಕ್ರೂಯೀಸ್ ನಿರ್ದೇಶಕ ರಾಜ್ ಸಿಂಗ್ ಹೇಳಿದರು. ನಲ್ವತ್ತು ಸಿಬ್ಬಂದಿಗೆ ವಾಸ ಸೌಕರ್ಯವೂ ಇದರಲ್ಲಿದೆ. ಹಡಗು 62 ಮೀಟರ್ ಉದ್ದ. 12 ಮೀಟರ್ ಅಗಲ ಇದೆ. 27 ನದಿಗಳಲ್ಲಿ ಪ್ರವಾಸ. ವಿವಿಧ ಕೇಂದ್ರಗಳಿಗೆ ಭೇಟಿ. ದೇಶಿ ಉದ್ಯಾನಗಳು, ನದೀಘಾಟ್‍ಗಳು. ಬಿಹಾರದ ಪಾಟ್ನಾ,  ಝಾರ್ಕಂಡಿನ ಶಾಹಿಗಂಜ್, ಪ.ಬಂಗಾಳದ ಕೋಲ್ಕತಾ. ಬಾಂಗ್ಲಾದೇಶದ ಢಾಕಾ, ಅಸ್ಸಾಮಿನ ಗುವಾಹಟಿ ಸಹಿತ ಮುಖ್ಯ ನಗರಗಳು ಮತ್ತು ಪ್ರವಾಸಿ ಕೇಂದ್ರಗಳನ್ನು ಸಂದರ್ಶಿಸಬಹುದು ಎಂದು ಪ್ರವಾಸೋದ್ಯಮ ಸಚಿವ ಜಯ್‍ವೀರ್ ಸಿಂಗ್ ತಿಳಿಸಿದರು. ಒಂದು ದಿನಕ್ಕೆ 25,000ದಿಂದ 50,000ರೂಪಾಯಿ ಖರ್ಚು ಇದೆ. 51 ದಿವಸಕ್ಕೆ ಒಟ್ಟು ಖರ್ಚು ಸುಮಾರು 20 ಲಕ್ಷ ರೂಪಾಯಿ ಆಗುತ್ತದೆ ಎಂದು ರಾಜ್ ಸಿಂಗ್ ಹೇಳಿದರು.