ಪಾಕಿಸ್ತಾನ ಸೇನೆಯ ವೆಬ್‍ಸೈಟ್‍ನ್ನು ಸಂಪರ್ಕಿಸದಂತೆ ಭಾರತಕ್ಕೆ ನಿಷೇಧ ಹೇರಿದ ಪಾಕಿಸ್ತಾನ; ಹದಗೆಡುತ್ತಿರುವ ಉಭಯ ದೇಶಗ ಸಂಬಂಧ

0
577

ಹೊಸದಿಲ್ಲಿ, ಆ. 5: ಭಾರತ , ಪಾಕಿಸ್ತಾನಗಳ ನಡುವೆ ಸಮಸ್ಯೆ ಹೆಚ್ಚು ಹದಗೆಟ್ಟ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ವೆಬ್‍ಸೈಟನ್ನು ಭಾರತದಿಂದ ಸಂದರ್ಶಿಸದಂತೆ ನಿಷೇಧಿಸಿದೆ. ವೆಬ್‍ಸೈಟ್ ಸಂಪರ್ಕಿಸಲು ಯತ್ನಿಸುವಾಗ ನಿಮ್ಮ ಐಪಿ ವಿಳಾಸ ಇರುವ ದೇಶಕ್ಕೆ, ಪ್ರದೇಶಕ್ಕೆ ಈ ವೆಬ್‍ಸೈಟ್ ಲಭ್ಯಗೊಳಿಸುವುದನ್ನು ಮಾಲಕರು ನಿಷೇಧಿಸಿದ್ದಾರೆ ಎಂಬ ಬರಹಗಳು ಕಾಣಿಸಿಕೊಂಡಿದೆ.

ಅಮರನಾಥ್ ಯಾತ್ರಿಗಳ ಮೇಲೆ ಪಾಕಿಸ್ತಾನದ ಸೈನ್ಯದ ಬೆಂಬಲದಲ್ಲಿ ಭಯೋತ್ಪಾದನಾ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಇಂಟಲಿಜೆನ್ಸ್ ವರದಿ ಸಿಕ್ಕ ಬಳಿಕ ಕಾಶ್ಮೀರಕ್ಕೆ ಭಾರತ ಹೆಚ್ಚವರಿ ಸೇನೆಯನ್ನು ನಿಯೋಜಿಸಿದೆ. ರವಿವಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‍ರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಸುರಕ್ಷಾ ಸಮಿತಿ ಸಭೆಯಲ್ಲಿ ಬೆಳವಣಿಗೆಗಳ ಕುರಿತು ಚರ್ಚಿಸಲಾಗಿತ್ತು.

ಭಾರತ ಯುದ್ಧ ಅಸ್ತ್ರಗಳನ್ನು ಉಪಯೋಗಿಸುತ್ತಿದೆ ಎಂದು ಇಮ್ರಾನ್ ಖಾನ್ ಆರೊಪಿಸಿದ್ದರು. ಆದರೆ ಭಾರತ ಇದನ್ನು ನಿರಾಕರಿಸಿದ್ದು ಸ್ಪಷ್ಟ ಅಜೆಂಡಾದ ಭಾಗವಿದು ಎಂದು ಹೇಳಿತ್ತು.