ಸನ್ಮಾರ್ಗ ವಾರ್ತೆ
ಇಸ್ಲಾಮಾಬಾದ್: ಪಾಕಿಸ್ತಾನದ ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಮೂರ್ತಿಯಾಗಿ ಲಾಹೋರ್ ಹೈಕೋರ್ಟ್ನ ನ್ಯಾಯಮೂರ್ತಿ ಆಯಿಷಾ ಮಲಿಕ್ ಆಯ್ಕೆಯಾಗಿದ್ದಾರೆ.
ಚೀಫ್ ಜಸ್ಟಿಸ್ ಗುಲ್ಜಾರ್ ಅಹ್ಮದ್ ನೇತೃತ್ವದಲ್ಲಿ ಪಾಕಿಸ್ತಾನ ನ್ಯಾಯಾಂಗ ಆಯೋಗ(ಜೆಸಿಪಿ) ನಾಲ್ವರ ವಿರುದ್ಧ ಐದು ಬಹುಮತಗಳಿಂದ ಗೆದ್ದ ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರನ್ನು ನ್ಯಾಯಾಮೂರ್ತಿಯಾಗಿ ನೇಮಕಗೊಳಿಸಲು ಅನುಮೋದಿಸಿದೆ.
ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರ ಬಡ್ತಿಗೆ ಸಂಬಂಧಿಸಿದಂತೆ ಜೆಸಿಪಿ ಸಭೆ ನಡೆಸುತ್ತಿರುವ ಎರಡನೇ ಬಾರಿ ಸಭೆ ಇದಾಗಿದ್ದು, ಕಳೆದ ವರ್ಷ ಸೆಪ್ಟೆಂಬರ್ 9 ರಂದು ಮೊದಲ ಬಾರಿಗೆ ಆಯಿಷಾ ಮಲಿಕ್ ಅವರ ಹೆಸರು ಕೇಳಿಬಂದಿತ್ತು. ಆದರೆ ಬಹುಮತ ಅವರ ಪರ ಇರಲಿಲ್ಲ. ಸೇವೆಯ ಪ್ರಕಾರ ಇವರಿಗೆ 2030ರಲ್ಲಿ ಚೀಫ್ ಜಸ್ಟಿಸ್ ಆಗುವ ಅವಕಾಶವಿದೆ ಎನ್ನಲಾಗುತ್ತಿದೆ.












