ಭಾರತ- ಪಾಕ್ ಗಡಿಯಲ್ಲಿ ಹುಟ್ಟಿದ ಮಗುವಿಗೆ ‘ಬಾರ್ಡರ್’ ಎಂದು ಹೆಸರಿಟ್ಟ ದಂಪತಿ

0
253

ಸನ್ಮಾರ್ಗ ವಾರ್ತೆ

ಚಂಡೀಗಡ: ಭಾರತ- ಪಾಕಿಸ್ತಾನದ ಗಡಿಯಲ್ಲಿ ಹುಟ್ಟಿದ ಮಗುವಿಗೆ ಪಾಕಿಸ್ತಾನದ ದಂಪತಿಗಳು ‘ಬಾರ್ಡರ್’ ಎಂದು ನಾಮಕರಣ ಮಾಡಿದ್ದಾರೆ. ಪಾಕಿಸ್ತಾನ ಗಡಿ ಅಟಾರಿಯಲ್ಲಿ ಡಿಸೆಂಬರ್ ಎರಡಕ್ಕೆ ಮಗು ಜನಿಸಿತ್ತು.

ಅಟ್ಟಾರಿ ಅಂತಾರಾಷ್ಟ್ರೀಯ ಗಡಿಯಲ್ಲಿ ಸಮೀಪ ಪಾರ್ಕಿಂಗ್ ಗ್ರೌಂಡ್‍ನಲ್ಲಿ ಟೆಂಟ್ ಹಾಕಿ ಕಳೆದ 71 ದಿವಸದಿಂದ 98 ಮಂದಿ ಪಾಕಿಸ್ತಾನದ ಪ್ರಜೆಗಳೊಂದಿಗೆ ನಿಂಪು ಬಾಯಿ, ಬಲರಾಮ್ ದಂಪತಿ ಉಳಿದುಕೊಂಡಿದ್ದಾರೆ. ಇವರ ಮನೆ ಇರುವುದು ಪಾಕಿಸ್ತಾನದ ಪಂಜಾಬಿನ ರಾಜನ್ ಪುರ ಜಿಲ್ಲೆಯಲ್ಲಾಗಿದ್ದು, ಭಾರತ ಪಾಕಿಸ್ತಾನದ ಗಡಿಯಲ್ಲಿ ಹುಟ್ಟಿದ ಮಗುವಿಗೆ ಬಾರ್ಡರ್ ಹೆಸರನ್ನಿಡಲಾಗಿದೆ.

ಲಾಕ್ ಡೌನ್ ಮೊದಲು ಸಂಬಂಧಿಕರನ್ನು ಭೇಟಿಯಾಗಲು ಇವರ ಭಾರತಕ್ಕೆ ಬಂದಿದ್ದರು. ಅದರೆ ಅಗತ್ಯ ದಾಖಲೆ ಪತ್ರ ಇವರ ಬಳಿಯಿಲ್ಲ. ಆದ್ದರಿಂದ ಮರಳಲು ಆಗುತ್ತಿಲ್ಲ. ಗಡಿಯಲ್ಲೇ ಉಳಿಯಬೇಕಾಗಿ ಬಂದ ನಿಂಪು ಬಾಯಿಗೆ ಗುರುವಾರ ಹೆರಿಗೆ ನೋವು ಬಂತು. ಪಂಜಾಬ್‍ನ ಹತ್ತಿರದ ಗ್ರಾಮದಿಂದ ಮಹಿಳೆಯರು ಬಂದು ಮಗು ಮತ್ತು ತಾಯಿ ಆರೈಕೆ ಮಾಡಿದರು. ಅಗತ್ಯವಿರುವ ವೈದ್ಯಕೀಯ ಸಹಾಯ ಮಾಡಿದರು.

ಪಾಕಿಸ್ತಾನಕ್ಕೆ ಹೋಗಲು ಕಾಯುತ್ತಿರುವವರಲ್ಲಿ 47 ಮಂದಿ ಮಕ್ಕಳಿದ್ದಾರೆ. ಒಬ್ಬನ ಹೆಸರು ಭಾರತ್ ಎಂದಾಗಿದೆ. ಜೋಧಪುರದಲ್ಲಿ 2020ರಲ್ಲಿ ಈ ಮಗು ಹುಟ್ಟಿತ್ತು. ಈ ಬಾಲಕನ ತಂದೆ ಜೋಧಪುರದಲ್ಲಿರುವ ಸಹೋದರನನು ಭೇಟಿಯಾಗಲು ಬಂದಿದ್ದರು. ಅಟ್ಟಾರಿ ಅಂತಾರಾಷ್ಟ್ರೀಯ ಗಡಿಯಲ್ಲಿ ಸಮೀಪ ಪಾರ್ಕಿಂಗ್ ಗ್ರೌಂಡ್‍ನಲ್ಲಿ ಟೆಂಟ್ ಹಾಕಿ ಇವರು ಉಳಿದುಕೊಂಡಿದ್ದಾರೆ. ಸ್ಥಳೀಯರು ಇವರಿಗೆ ಮದ್ದು ಬಟ್ಟೆ ಆಹಾರ ಕೊಡುತ್ತಿದ್ದಾರೆ.