ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ನಾಮ ಪತ್ರ ಸಲ್ಲಿಕೆ, ಭಾರೀ ಬೆಂಬಲ

0
661

ಬೆಂಗಳೂರು, ಮಾ. 20: ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಅಪಾರ ಬೆಂಬಲಿಗರ ಜೊತೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಸಿಲ್ವರ್ ಜ್ಯೂಬಿಲಿ ಪಾರ್ಕಿನಿಂದ ರ್ಯಾಲಿ ಕೂಡಾ ನಡೆಯಲಿದೆ.

ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ತೆರಳಿದ್ದಾರೆ. ನಾಮಪತ್ರ ಸಂದರ್ಭದಲ್ಲಿ ದರ್ಶನ್ ಉಪಸ್ಥಿತರಿರುವವರು ಎಂದು ಹೇಳಲಾಗಿತ್ತು. ಆದರೆ ಅವರು ರ್ಯಾಲಿಯ ಸಿದ್ಧತೆಯಲ್ಲಿ ನಿರತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಿವಂಗತ ಅಂಬರೀಶ್ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಅಹಿಂದ ನಾಯಕರನ್ನು ಒಟ್ಟುಗೂಡಿಸಿ ಅವರು ನಾಮ ಪತ್ರವನ್ನು ಸಲ್ಲಿಸಿದ್ದು ಈ ಮೂಲಕ ತಾನು ಜಾತಿ ರಾಜಕೀಯ ಮಾಡುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಜೆಡಿಎಸ್ ಭದ್ರಕೋಟೆಯಲ್ಲಿ ದೇವಗೌಡರ ಮೊಮ್ಮಗ ಮತ್ತು ಕುಮಾರಸ್ವಾಮಿ ಪುತ್ರನ ವಿರುದ್ಧ ಅಗ್ನಿ ಪರೀಕ್ಷೆಗಿಳಿದಿದುದು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಸಲದ ಚುನಾವಣೆ ಕುತೂಹಲ ಸೃಷ್ಟಿಸಲಿದೆ. ರೈತ ಸಂಘಟನೆಗಳು ಮತ್ತು ಇತರ ಹಲವು ಸಂಘಟನೆಗಳು ಸುಮಲತಾರಿಗೆ ಬೆಂಬಲ ಸೂಚಿಸುತ್ತಿವೆ. ಮದ್ದೂರಿನಿಂದ ಬೈಕ್ ರ್ಯಾಲಿ ಹೊರಟಿದೆ. ಇದೇವೇಳೆ, ಕಾಂಗ್ರೆಸ್ ನಾಯಕರು ಕೂಡಾ ಸುಮಲತಾರನ್ನು ಬೆಂಬಲಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಇದು ಮುಂಬರುವ ದಿನಗಳಲ್ಲಿ ಕಾಂಗ್ರೆಸ್- ಜೆಡಿಎಸ್ ದೋಸ್ತಿಯಲ್ಲಿ ಬಿರುಕು ಸೃಷ್ಟಿಸಲು ಕಾರಣವಾಗಬಹುದು ಎನ್ನಲಾಗುತ್ತಿದೆ.