ಗೋವಾ ವಿಧಾನಸಭೆಯಲ್ಲಿ ಇಂದು ವಿಶ್ವಾಸಮತ ಯಾಚನೆ: ಬಿಜೆಪಿ ಶಾಸಕರು ರೆಸಾರ್ಟ್ ನಲ್ಲಿ

0
656

ಪಣಜಿ, ಮಾ.20: ಗೋವಾ ನೂತನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದು. ಬಿಜೆಪಿ ತನ್ನೆಲ್ಲ ಶಾಸಕರನ್ನು ಫೈಸ್ಟಾರ್ ಹೊಟೇಲಿನಲ್ಲಿರಿಸಿದೆ. ವಿಶ್ವಾಸ ಮತಯಾಚನೆಯ ವೇಳೆ ಅವರನ್ನು ಒಟ್ಟಾಗಿ ವಿಧಾನಸಭೆಗೆ ಕರೆತರಲಿದೆ.

ಮೊನ್ನೆ ತಡ ರಾತ್ರೆ ನಿಧನರಾದ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ರ ಸ್ಥಾನಕ್ಕೆ ಪ್ರಮೋದ್ ಸಾವಂತ್‍ರನ್ನು ಆಯ್ಕೆ ಮಾಡಲಾಗಿತ್ತು. 40 ಮಂದಿ ಸದಸ್ಯ ಬಲದ ಗೋವಾ ವಿಧಾನಸಭೆಯ ಶಾಸಕರ ಸಂಖ್ಯೆ 36ಕ್ಕೆ ಕುಸಿದಿದೆ. ಬಿಜೆಪಿ 12 ಶಾಸಕರ ಬಲವನ್ನು ಹೊಂದಿದ್ದರೆ ಕಾಂಗ್ರೆಸ್ ಹದಿನಾಲ್ಕು ಶಾಸಕರನ್ನು ಹೊಂದಿದೆ. ಕಾಂಗ್ರೆಸ್ ನ ಇಬ್ಬರು ಶಾಸಕರಾದ ದಯಾನಂದ ಸೊಫ್ಟೆ ಮತ್ತು ಶುಭಾಸ್ ಶಿರೋಡ್ಕರ್ ಈಗಾಗಲೇ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಮೈತ್ರಿಕೂಟದಲ್ಲಿ ಬಿಜೆಪಿ 12, ಗೋವಾ ಫಾರ್ವಡ್‍ ಬ್ಲಾಕ್ 3, ಮಹಾರಾಷ್ಟ್ರವಾದಿ ಗೋಮಾಂತಕ ಪಾಟಿ 3 ಮತ್ತು 3 ಮಂದಿ ಪಕ್ಷೇತರ ಶಾಸಕರು ಇದ್ದಾರೆ. ಇತ್ತ ಕಾಂಗ್ರೆಸ್ ಬಣದಲ್ಲಿ ಹದಿನಾಲ್ಕು ಮಂದಿ ಶಾಸಕರು ಹಾಗೂ ಓರ್ವ ಎನ್ಸಿಪಿ ಶಾಸಕ ಇದ್ದಾರೆ.