ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜು.29:ಭಾರತದ ಶಿಕ್ಷಣ ಕ್ಷೇತ್ರದ ವೃತ್ತಿಪರ ಕಾಲೇಜುಗಳು ಒಂದೊಂದೇ ಕುಸಿಯುತ್ತಿರುವುದು ಸುದ್ದಿಯಾಗಿದೆ. 2020-21 ಅಕಾಡಮಿಕ್ ವರ್ಷದಲ್ಲಿ ದೇಶದಲ್ಲಿ 180 ಪ್ರೊಫೆಸನಲ್ ಕಾಲೇಜುಗಳು ಹಲವು ಕಾರಣಗಳಿಗಾಗಿ ಮುಚ್ಚಲ್ಪಟ್ಟಿವೆ.
ಇಂಜಿನಿಯರಿಂಗ್ ಕಾಲೇಜುಗಳು, ಬಿಸಿನೆಸ್ ಸ್ಕೂಲ್‍ಗಳೆಲ್ಲವೂ ಈ ಸಾಲಿಗೆ ಸೇರಿವೆ. ತಂತ್ರಜ್ಞಾನ ಸಂಸ್ಥೆಗಳು ವಿಪರೀತ ಕಾಲಕ್ಕೆ ಸಾಕ್ಷಿಯಾಗುತ್ತಿವೆ. ಒಂಬತ್ತು ವರ್ಷದಲ್ಲಿ ಅತ್ಯಂತ ಹೆಚ್ಚು ಸಂಸ್ಥೆಗಳು ಮುಚ್ಚಿ ಹೋಗಿರುವುದು ಈ ವರ್ಷದಲ್ಲಿ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್ ಹೇಳಿದೆ.
ಐದು ವರ್ಷಗಳಿಂದ ಖಾಲಿ ಸೀಟುಗಳುಳ್ಳ 134 ಸಂಸ್ಥೆಗಳ ನೋಂದಣಿ ನವೀಕರಣಕ್ಕೆ ಅರ್ಜಿ ಸಲ್ಲಿಸಿಲ್ಲ. 44 ಸಂಸ್ಥೆಗಳ ವಿರುದ್ಧ ಕ್ರಮ ಜರಗಿಸಿದ್ದರಿಂದ ಮುಚ್ಚಿಹೋಗಿವೆ. 2019-20 ಅಧ್ಯಯನ ವರ್ಷದಲ್ಲಿ 92 ತಂತ್ರಜ್ಞಾನ ಸಂಸ್ಥೆಗಳು ಮುಚ್ಚಿಹೋಗಿವೆ. 89 (2018-190, 134( 2017-18)126,(2015-16), 77(2014-15) ಮೂರು ವರ್ಷಗಳಲ್ಲಿ ಮುಚ್ಚಿಹೋಗಿವೆ. ಈ ನಡುವೆ 164 ಹೊಸ ಸಂಸ್ಥೆಗಳಿಗೆ 39,000 ಸೀಟುಗಳಿಗೆ ಅಖಿಲ ಭಾರತ ತಾಂತ್ರಿಕ ವಿಧ್ಯಾಭ್ಯಾಸ ಕೌನ್ಸಿಲ್ ಅನುಮತಿ ನೀಡಿದೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












