ಸಮುದ್ರ ತೀರದಲ್ಲಿ ಸೂಜಿ, ಆಸ್ಪತ್ರೆ ಮಾಲಿನ್ಯ: ಬೀಚ್ ಬಂದ್

0
570

ವಾಷಿಂಗ್ಟನ್, ನ. 11: ಸೂಜಿ ಸಹಿತ ಆಸ್ಪತ್ರೆಯ ಮಾಲಿನ್ಯಗಳು ಸಮುದ್ರ ತೀರದಲ್ಲಿ ಕಂಡು ಬಂದದ್ದರಿಂದ ಕ್ಯಾಲಿಫೂರ್ನಿಯದ ಬೀಚ್‍ನ ಒಂದು ಭಾಗವನ್ನು ಅಧಿಕಾರಿಗಳು ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿದ್ದಾರೆ. ರವಿವಾರ ಬೆಳಗ್ಗೆ ಅಲ್ಲಿನ ಸಮಯ ಬೆಳಗ್ಗೆ 11:30ಕ್ಕೆ ಬೀಚ್‍ನಲ್ಲಿ ಮಾಲಿನ್ಯಗಳು ಕಾಣಿಸಿಕೊಂಡಿತ್ತು. ಸಮುದ್ರ ತೀರದಾದ್ಯಂತ ಆಸ್ಪತ್ರೆ ಮಾಲಿನ್ಯ ಕಂಡು ಬಂದಿದೆ.

ನಂತರ ಲೈಫ್ ಗಾರ್ಡ್‍ಗಳು ಆರೋಗ್ಯ ಇಲಾಖೆಗೆ ವಿವರ ನೀಡಿದ್ದರು. ಲಾಸ್ ಆಜೆಂಲ್ಸ್ ವೆನೀಸ್ ಬೀಚ್ ಪಿಯರ್‍ನ ದಕ್ಷಿಣ ಭಾಗದಲ್ಲಿ ಘಟನೆ ಆಗಿದೆ. ಮಾಲಿನ್ಯ ಕಂಡು ಬಂದೊಡನೆ ಬೀಚ್ ಮುಕ್ತ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದರು. ಎಲ್ಲಿಂದ ಈ ಮಾಲಿನ್ಯಗಳು ಬಂದಿವೆ ಎಂದು ಗೊತ್ತಾಗಿಲ್ಲ. ಆಸ್ಪತ್ರೆಯ ಮಾಲಿನ್ಯ ಮಾತ್ರವೇ ಬೇರೇನಾದರೂ ಇವೆಯೇ ಎಂದು ಲೈಫ್ ಗಾರ್ಡ್‍ಗಳು ಸಮುದ್ರ ಮತ್ತು ಸಮುದ್ರ ತೀರದಲ್ಲಿ ಪರಿಶೀಲಿಸುತ್ತಿದ್ದಾರೆ.