ಅಬುಧಾಬಿ, ನ. 11: ಒಬ್ಬ ವಿಚಾರಣಾಧೀನ ಕೈದಿಯಾಗಿ ಅಬ್ದುನ್ನಾಸರ್ ಮಅದನಿಗೆ ಹೋಲಿಕೆಯಿಲ್ಲದಂತಹ ನ್ಯಾಯ ನಿರಾಕರಣೆಯಾಗಿದೆ ಎಂದು ಮಾಜಿ ಸಂಸದ, ಮಾಧ್ಯಮ-ಸಾಮಾಜಿಕ ನಿರೀಕ್ಷಕ ಡಾ. ಸೆಬಸ್ಟಿಯನ್ ಪಾಲ್ ಹೇಳಿದರು. ಹತ್ತು ವರ್ಷ ಕ್ರೂರ ಜೈಲಿನ ಬಳಿಕ ನಿರಪರಾಧಿಯೆಂದು ಮನವರಿಕೆಯಾಗಿ ಬಿಡುಗಡೆಗೊಳಿಸಲಾಗಿತ್ತು. ಇಂತಹ ಒಬ್ಬ ಮನುಷ್ಯನೊಂದಿಗೆ ಸರಕಾರ ಈಗ ನಡೆಸುತ್ತಿರುವ ಅನ್ಯಾಯದ ವಿರುದ್ಧ ಸಾರ್ವಜನಿಕ ಆಕ್ರೋಶ ಎದ್ದು ಬರಬೇಕಾಗಿದೆ. ಅನ್ಯಾಯದ ಸಂಕಲೆ ಕಳಚಿ, ಮದನಿಯ ಜೀವ ರಕ್ಷಿಸಿ ಎಂಬ ಘೋಷಣೆಯೊಂದಿಗೆ ಅಬುಧಾಬಿ ಪಿಸಿಎಫ್ ಆಯೋಜಿಸಿದ ಮಅದನಿಗೆ ಬೆಂಬಲ ಸೂಚಿಸುವ ಸಭೆಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಮದನಿ ಪ್ರಕರಣ ಯುಎಪಿಎ ದುರುಪಯೋಗಕ್ಕೆ ದೊಡ್ಡ ಉದಾಹರಣೆಯಾಗಿದೆ. ಇತ್ತೀಚೆಗೆ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಅದರ ಬಳಕೆಯಾಗಿರುವುದನ್ನು ನಾವು ನೋಡಿದ್ದೇವೆ.
ಆಳುವವರಿಗೂ ತೀರ್ಮಾನಿಸಲು ಸಾಧ್ಯವಾಗದ್ದು ಈ ಕಾನೂನಿನ ಭಯಾನಕತೆಯನ್ನು ಬಹಿರಂಗಪಡಿಸುತ್ತದೆ. ನ್ಯಾಯ ನಿರಾಕರಿಸಲ್ಪಟ್ಟು ಜೈಲಿನೊಳಗೆ ಇರುವ ನೂರಾರು ಜನರ ಬಿಡುಗಡೆಗಾಗಿ ಹೋರಾಡುವುದಕ್ಕೆ ಜಾತಿ, ಧರ್ಮ ರಾಜಕೀಯ ನಮಗೆ ಅಡ್ಡಿಯಾಗಬಾರದು ಎಂದು ಡಾ. ಸೆಬಸ್ಟಿಯನ್ ಪಾಲ್ ಹೇಳಿದರು.












