ರಾಜಕೀಯ ದುರುದ್ದೇಶಕ್ಕೆ ಧರ್ಮ ಬಳಸುವವರಿಗೆ ಜನರು ಪಾಠ ಕಲಿಸಲಿದ್ದಾರೆ: ಸಿದ್ದರಾಮಯ್ಯ

0
86

ಸನ್ಮಾರ್ಗ ವಾರ್ತೆ

ಕಾಮಗಾರಿ ಪೂರ್ಣಗೊಳ್ಳದಿದ್ದರೂ ಅಯೋಧ್ಯೆ ರಾಮ ಮಂದಿರವನ್ನು ಆತುರಾತುರವಾಗಿ ಉದ್ಘಾಟಿಸಲಾಗಿದೆ. ದೇಶದ ಜನರು ಜಾತ್ಯತೀತತೆ ಒಪ್ಪಿಕೊಂಡವರು. ಸಂವಿಧಾನವೂ ಧರ್ಮ ನಿರಪೇಕ್ಷತೆಯನ್ನು ಪ್ರತಿಪಾದಿಸುತ್ತದೆ. ರಾಜಕೀಯ ದುರುದ್ದೇಶ ಹೊಂದಿರುವವರಿಗೆ ಜನರು ಪಾಠ ಕಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೋಮುವಾದಿ ಶಕ್ತಿಗಳ ವಿರುದ್ಧವಾಗಿ ಹೋರಾಡಲು ಇಂಡಿಯಾ ಬ್ಲಾಕ್ ರೂಪಗೊಂಡಿದೆ. ಲೋಕಸಭಾ ಚುನಾವಣೆ ಕುರಿತು ಇನ್ನೂ ಮಾತುಕತೆಗಳು ನಡೆಯುತ್ತಿವೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಐಪಿಸಿ, ಪೊಲೀಸ್ ಕಾಯ್ದೆ ಉಲ್ಲಂಘನೆಯಾಗಿದ್ದರೆ ಮಾತ್ರ ಎಫ್ಐಆರ್ ದಾಖಲಿಸಬೇಕು. ಆದರೆ ಯಾವುದೇ ತಪ್ಪಿಲ್ಲದಿದ್ದರೂ ರಾಹುಲ್ ಗಾಂಧಿ ಅವರ ಭಾರತ ಜೋಡೋ ನ್ಯಾಯ ಯಾತ್ರೆಯನ್ನು ನಿಷ್ಕ್ರಿಯಗೊಳಿಸುವ ಕೆಲಸವನ್ನು ಅಸ್ಸಾಂ ಸರಕಾರ ಮಾಡ್ತಾ ಇದೆ. ಅದು ಅವರಿಗೆ ತಿರುಗು ಬಾಣವಾಗಲಿದೆ ಎಂದವರು ಹೇಳಿದ್ದಾರೆ.