ಭಟ್ಕಳ: ಎಲ್‌ಪಿಜಿ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರುದ್ಧ ವೆಲ್ಫೇರ್ ಪಾರ್ಟಿಯಿಂದ ಪ್ರತಿಭಟನೆ

0
474

ಸನ್ಮಾರ್ಗ ವಾರ್ತೆ

ಭಟ್ಕಳ: ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಭಟ್ಕಳ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮೂಲಕ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೀರ್ ಹುಸೇನ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಮಾನ್ಯ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದು ಸಾಮಾನ್ಯರು ಎಚ್ಚೆತ್ತುಕೊಳ್ಳಬೇಕು ಎಂಬುದಾಗಿ ಕರೆ ನೀಡಿದರು.

ಸರ್ಕಾರದಲ್ಲಿರುವವರನ್ನು ನಾವು ಆರಿಸಿ ಕಳಿಸಿದ್ದು, ಜನರ ಸಮಸ್ಯೆಗಳನ್ನು ಬಗೆಹರಿಸಲು ಆದರೆ ಇಂದು ಅಧಿಕಾರದಲ್ಲಿರುವವರೇ ಜನರನ್ನು ಸಮಸ್ಯೆಗಳಿಗೆ ತಳ್ಳುತ್ತಿದ್ದಾರೆ. ಪೆಟ್ರೋಲ್ ಡಿಸೇಲ್ ಹಾಗೂ ಎಲ್‌ಪಿಜಿ ಬೆಲೆಯನ್ನು ಏರಿಸಿದ್ದು ಇದನ್ನು ಕಡಿತಗೊಳಿಸುವವರೆಗೂ ನಾವು ಉಗ್ರವಾಗಿ ಹೋರಾಡುತ್ತೇವೆ. ಇದು ಯಾವುದೇ ಪಕ್ಷದ, ಸಮುದಾಯದ ಸಮಸ್ಯೆಯಲ್ಲ ಬದಲಾಗಿ ಇಡಿ ದೇಶದ ಸಾಮಾನ್ಯ ಜನರ ಬದುಕಿನ ಪ್ರಶ್ನೆಯಾಗಿದೆ. ಪೆಟ್ರೋಲ್ ಬಂಕ್‌ನವರು ಪೆಟ್ರೋಲ್ ಹಾಕುವಾಗ ನೀವು ಬಿಜೆಪಿಯವರ ಅಥವಾ ಕಾಂಗ್ರೆಸ್‌ನವರಾ ಎಂದು ಕೇಳುವುದಿಲ್ಲ. ನೂರು ರೂಪಾಯಿ ನೋಟು ಕೊಟ್ರರೆ ಮಾತ್ರ ಪೆಟ್ರೋಲ್ ಹಾಕುತ್ತಾರೆ ಆದ್ದರಿಂದ ಪಕ್ಷರಹಿತವಾಗಿ ನಮ್ಮ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿಕೊಂಡರು.