ಪೆಟ್ರೋಲ್ ಬೆಲೆಯನ್ನು ಇನ್ನೂ ಹೆಚ್ಚಿಸಬೇಕು: ಕೇರಳ ಮಾಜಿ ಡಿಜಿಪಿ

0
490

ಸನ್ಮಾರ್ಗ ವಾರ್ತೆ

ತಿರುವನಂತಪುರಂ: ಇಂಧನ ದರ ಹೆಚ್ಚಳವನ್ನು ಕೇರಳದ ಮಾಜಿ ಡಿಜಿಪಿ ಸಮರ್ಥಿಸಿಕೊಂಡಿದ್ದಾರೆ. ಇಂಧನ ದರ ಹೆಚ್ಚಿದರೆ ಬಳಕೆ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು. ಇಂಧನ ಬೆಲೆ ಹೆಚ್ಚಿಸುವ ಮೂಲಕ ಅದರ ಬಳಕೆಯನ್ನು ಕಡಿಮೆ ಮಾಡಬಹುದು. ಟೆಸ್ಸಾದಂತ ಕಂಪೆನಿಗಳು ಇದರ ಸಾಧ್ಯತೆಗೆ ಚಾಲನೆ ನೀಡಬೇಕೆಂದು ಖಾಸಗಿ ಚಾನೆಲ್‌ನೊಂದಿಗೆ ಜೇಕಬ್ ಹೇಳಿದರು.

ಇದರೊಂದಿಗೆ ಭಾರತದಲ್ಲಿ ಇಲೆಕ್ಟ್ರಿಕ್ ಕಾರುಗಳು ಬಳಕೆಗೆ ಬರಲಿವೆ. ಇಂಧನ ದರ ಹೆಚ್ಚಳ ಉತ್ತಮವೆಂದು ಪರಿಸರವಾದಿಯಾದ ನಾನು ಹೇಳುವೆ. ಇವುಗಳ ಮೇಲಿನ ತೆರಿಗೆ ದರವನ್ನು ಹೆಚ್ಚಿಸಿದರೆ ಸೇತುವೆ, ಶಾಲೆಗಳಿಗೆ ಕಂಪ್ಯೂಟರ್ ಖರೀದಿಸಲು ಸಾಧ್ಯ ಎಂದು ಅವರು ಹೇಳಿದರು.

ತಾನು ಯಾಕೆ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ಅವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು. ಸಿವಿಲ್ ಸರ್ವಿಸ್ ಆಯ್ಕೆ ನಡೆಯುವಾಗ ದೇಶದ ಜನರ ಸೇವೆ ಬಯಸಿದ್ದೆ. ರಾಷ್ಟ್ರಪ್ರಜ್ಞೆಯಿಲ್ಲದ ಕೆಲವರ ಇಷ್ಟಗಳಿಗೆ ವಿರುದ್ಧ ನಿಂತಾಗ ಅಪಮಾನಿಸಿದರು. ಮಾನಸಿಕ ಕಿರುಕುಳ ಕೊಟ್ಟರು ಎಂದು ಜೇಕಬ್ ದೂರಿದರು.