ಲಾಲು ಪ್ರಸಾದ್ ಯಾದವ್‌ ಬಂಗ್ಲೆಯಿಂದ ಆಸ್ಪತ್ರೆಗೆ

0
187

ಸನ್ಮಾರ್ಗ ವಾರ್ತೆ

ರಾಂಚಿ: ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್‍ರನ್ನು ಚಿಕಿತ್ಸೆಗಾಗಿ ಇರಿಸಲಾಗಿದ್ದ ಆಸ್ಪತ್ರೆಯ ನಿರ್ದೇಶಕರ ಬಂಗ್ಲೆಯಿಂದ ಪೇ ವಾರ್ಡಿಗೆ ವರ್ಗಾಯಿಸಲಾಗಿದೆ. ವಿವಿಧ ರೋಗಗಳಿಂದ ಬಳಲುತ್ತಿರುವ ಲಾಲುರವರು ರಾಜೇಂದ್ರ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ ಕೊರೋನ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಂಗ್ಲೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಇಲ್ಲಿಂದ ಲಾಲು ಬಿಹಾರದ ಬಿಜೆಪಿ ಶಾಸಕರಿಗೆ ಫೋನ್ ಕರೆ ಮಾಡಿದರೆಂದು ದೂರು ಬಂದ ಹಿನ್ನೆಲೆಯಲ್ಲಿ ಪೇ ವಾರ್ಡಿಗೆ ಸ್ಥಳಾಂತರಿಸಲಾಗಿದೆ. ಸ್ಪೀಕರ್ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿ ಸೋಲಿಸಲು ಲಾಲು ಬಿಜೆಪಿ ಶಾಸಕರ ಸಹಾಯ ಯಾಚಿಸಿದರೆಂದು ಆರೋಪ ಹೊರಿಸಲಾಗಿದ್ದು ಮೇವು ಹಗರಣದಲ್ಲಿ 2017ರಿಂದ ಲಾಲು ಜೈಲು ಪಾಲಾಗಿದ್ದಾರೆ.