ಪಿಕ್ ನಿಕ್ ಮತ್ತು ದುಷ್ಟ ಅಪ್ಪ (ಸಣ್ಣ ಕತೆ)

0
1001

✒ಜಲೀಲ್ ಮುಕ್ರಿ

ಎಂದಿನಂತೆ ಅಮ್ಮ ಒಲೆಯಲ್ಲಿ ಚಹಾ ತಯಾರಿಯಲ್ಲಿದ್ದಳು.ಅಪ್ಪ ಪತ್ರಿಕೆ ಓದುತಿದ್ದರು.ನಾನು ಶಾಲೆಗೆ ಹೊರಡುತ್ತಿದ್ದೆ.ನನ್ನ ಗೆಳೆಯರು ನಾಡಿದ್ದು ಹೋಗುವ ಪಿಕ್ ನಿಕ್ ಸಂಭ್ರಮದಲ್ಲಿದ್ದರು. ತೀರಾ ಬಡಕುಟುಂಬ ಅಪ್ಪನಿಗೆ ಕೂಲಿ ಕೆಲಸ ಅಮ್ಮನ ಕೆಮ್ಮುತ್ತಾ ಕಟ್ಟುವ ಒಂದಿಷ್ಟು ಬೀಡಿ ಜೀವನಾಧಾರ.

ಪಿಕ್ ನಿಕ್ ಗೆ 800 ರೂಪಾಯಿ ಬೇಕಿತ್ತು.ಹಿಂದಿನ ಕಾಲದಲ್ಲಿ ಅದೊಂದು ದೊಡ್ಡ ಮೊತ್ತವೇ ಸರಿ.ದೈರ್ಯ ಮಾಡಿ ಅಪ್ಪನಲ್ಲಿ ಕೇಳಿಯೇ ಬಿಟ್ಟೆ ಪಿಕ್ ನಿಕ್ ಗೆ ಹೋಗಲಾ ? ಎಂದು.

ಪೇಪರು ನೋಡುತಿದ್ದರು ಉತ್ತರ ಕೊಡಲಿಲ್ಲ.

ಮತ್ತೆ ಕೇಳಿದೆ..

ಪತ್ರಿಕೆ ಸ್ವಲ್ಪ ಕೆಳಗೆ ಮಾಡಿ ಬೇಡ ಎಂದರು…

ತಂದೆಯವರೊಂದಿಗೆ ಎದುರುತ್ತರ ಕೊಡದ ನಾನು ಕೋಪದಿ
ಒಂದಿಷ್ಟು ಒರಟು ಮಾತನಾಡಿದೆ…

ಗೆಳೆಯರೆಲ್ಲರೂ ಹೋಗುತ್ತಾರೆ.ನಾನೊಬ್ಬನೇ ಹೋಗುವುದಿಲ್ಲ.
ನೀವೆಂಥಾ ಅಪ್ಪ. ಮಕ್ಕಳ ಖುಷಿಗೆ ಸಪೋರ್ಟ್ ಮಾಡದವರು.ನೀವು ಗೆಳೆಯರ ತಂದೆಯವರಿಂದ ತುಂಬಾ ಕಲಿಯಲಿಕ್ಕಿದೆ…ಏನೆಲ್ಲಾ ಬಯ್ಯುತ್ತಿದ್ದೆ…

ಅಮ್ಮ ನನ್ನ ಮಾತಿನಿಂದ ಚಕಿತರಾಗಿದ್ದರು.

ಅಮ್ಮ ಆರ್ಥಿಕ ಸ್ಥಿತಿ ಸರಿಯಿಲ್ಲಪ್ಪಾ..ನಿನಗೆ ಗೊತ್ತಿಲ್ವಾ ? ನೀನು ಯಾವಾಗ ದೊಡ್ಜವನಾಗ್ತಿಯಾ ? ಎಂದು ಸಮಾಧಾನಿಸುತ್ತಿದ್ದರು. ಎಳೆ ಮನಸ್ಸಿಗೆ ಯಾವುದೂ ಹಿಡಿಸುತ್ತಿರಲಿಲ್ಲ…ಕೋಪದಿಂದ ಸ್ಕೂಲ್ ಬ್ಯಾಗ್ ಹೆಗಲಿಗೇರಿಸಿ ಸ್ಕೂಲಿನತ್ತ ಹೆಜ್ದೆ ಹಾಕಿದೆ.

ಸಾಯಂಕಾಲ ಮನೆಗೆ ಬಂದವನೇ ಕೋಪ ತಣ್ಣಗಾಗಿರಲಿಲ್ಲ.ಮತ್ತಷ್ಟು ತಂದೆ ತಾಯಿಯವರಿಗೆ ಬೇಡದ ಮಾತುಗಳನ್ನು ಹೇಳಿದೆ.ರಾತ್ರಿಯಿಡೀ ಅಳುತ್ತಾ ಕಾಲಕಳೆದೆ.ಶ್ರೀಮಂತ ತಂದೆ ತಾಯಿಯ ಮಗನಾಗಿ ಹುಟ್ಟಬೇಕಿತ್ತು ಎಂದೆಲ್ಲಾ ಮನಸ್ಸಿನಲ್ಲಿ ಬಯಸಿದೆ..

ಬೆಳಿಗ್ಗೆ ಎದ್ದು ಯಾರಲ್ಲಿಯೂ ಮಾತನಾಡದೆ ಸ್ಕೂಲಿಗೆ ಹೊರಡಲನುವಾದೆ.ಕಣ್ಣಿನಿಂದ ನನಗರಿವಿಲ್ಲದೆ ಕಣ್ಣೀರು ಹರಿಯುತ್ತಿತ್ತು.

ತಂದೆಯವರು ಕರೆದಾಗ ಕೇಳಿಯೂ ಕೇಳದಂತೆ ಮಾಡಿ ನಿಮ್ಮ ಹಣದ ಕಷ್ಟದ ರಾಮಾಯಣ ಕೇಳಲು ನನಗೆ ಪುರುಸೊತ್ತಿಲ್ಲ ಎಂದೆ. ಮತ್ತೆ ಕರೆದಾಗ ಹತ್ತಿರ ಹೋದೆ.ಅಪ್ಪ ನನ್ನ ಕೈಗೆ 800 ರೂಪಾಯಿ ಕೊಡುತ್ತಾ ಪಿಕ್ ನಿಕ್ ಗೆ ಹೋಗು ಎಂದರು.

ನನ್ನ ಸಂತೋಷಕ್ಕೆ ಪಾರವೇ ಇಲ್ಲ.ಓಡುತ್ತಾ ಸ್ಕೂಲಿಗೆ ಹೊರಟೆ..ದಾರಿ ಮದ್ಯೆ ಟಿಫಿನ್ ಮರೆತದ್ದು ನೆನಪಾಗಿ ಮತ್ತೆ ಮನೆಗೆ ಬಂದೆ..

ಅಪ್ಪ ಅಮ್ಮನ ಮಾತು ಕೇಳಿಸುತ್ತಿತ್ತು. “ನೀವು ನಿಮ್ಮ ವಾಚ್ ಮಾರಿದ್ದೀರಿ ತಾನೆ…”

ಅಪ್ಪ ಯಾವುದೇ ಜವಾಬು ನೀಡಲಿಲ್ಲ….

ನಾನು ಟಿಫಿನ್ ತೆಗೆದು ಮತ್ತೆ ಸ್ಕೂಲಿಗೆ ಹೋದೆ.

ಮರುದಿನ ಬೆಳಿಗ್ಗೆ ಅಮ್ಮ ಬೇಗನೆ ಎಬ್ಬಿಸಿ ಪಿಕ್ ನಿಕ್ ಗೆ ಹೊತ್ತಾಯ್ತು ರೆಡಿಯಾಗು ಎಂದು ಖರ್ಚಿಗಾಗಿ ಬೀಡಿ ಸೂಪಿನೆಡೆಯಿಂದ 100 ರೂಪಾಯಿ ಕೊಟ್ಟರು..

ನಾನು ಹೋಗುವುದು ಕ್ಯಾನ್ಸಲ್ ಮಾಡಿದ್ದೇನಮ್ಮಾ…ಪತ್ರಿಕೆ ಓದುತ್ತಿರುವ ಅಪ್ಪನ ಬಳಿ ಹೋಗಿ “ಅಪ್ಪ ನನ್ನ ಕ್ಷಮಿಸಪ್ಪ…ತಪ್ಪಾಯಿತು ಎಂದು ಒಂದು ಬಾಕ್ಸ್ ಕೊಟ್ಟೆ.

“ಏನಿದು?” ಎಂದು ಕೇಳಿದರು.

ನಿಮ್ಮ ವಾಚ್ ತರಹ ಇಲ್ಲ.ಆದರೂ ಚೆನ್ನಾಗಿದೆಯಪ್ಪ ಎಂದು ಹೇಳಿದೆ….

ಅಪ್ಪನ ಕಣ್ಣಲ್ಲಿ ನೀರಹನಿ ಕಂಡೆ.ಅಪ್ಪ ನನ್ನ ತಬ್ಬಿ ಹಿಡಿಯುತ್ತಾ
ನೀನು ದೊಡ್ಡವನಾಗಿದ್ದಿ ಪುಟ್ಟಾ ಎಂದ ಹಣೆಗೊಂದು ಮುತ್ತನೀಡಿದರು.

(ವಾಯ್ಸ್ ಆಧಾರಿತ)