ಸನ್ಮಾರ್ಗ ವಾರ್ತೆ
ದುಬೈಯಿಂದ ಕೇವಲ ಎರಡೇ ಎರಡು ಗಂಟೆಯ ಒಳಗೆ ನಿಮ್ಮನ್ನು ಮುಂಬೈಗೆ ತಲುಪಿಸುವ ಟ್ರೈನ್ ಶೀಘ್ರದಲ್ಲೇ ಬರಲಿದೆ. ಕಡಲಿನ ಒಳಗಡೆ ಈ ಟ್ರೈನ್ ಸಾಗಲಿದ್ದು ಗಂಟೆಗೆ 600 ರಿಂದ ಸಾವಿರ ಕಿಲೋ ಮೀಟರ್ ವೇಗದಲ್ಲಿ ಈ ಟ್ರೈನ್ ಚಲಿಸಲಿದೆ.
ಈ ಟ್ರೈನ್ ನಲ್ಲಿ ಪ್ರಯಾಣಿಕರು ಮಾತ್ರ ಅಲ್ಲ ನೀರು ಇಂಧನ ಸಹಿತ ಸರಕು ಸಾಮಗ್ರಿಗಳನ್ನು ಕೂಡ ಸಾಗಿಸಲಾಗುತ್ತದೆ. ಸದ್ಯ ಯುಎಇಯಿಂದ ಭಾರತಕ್ಕೆ ವಿಮಾನದ ಮೂಲಕ ತಲುಪುವುದಕ್ಕೆ ನಾಲ್ಕು ಗಂಟೆಗಳು ತಗಲುತ್ತವೆ. ಆದರೆ ಅತಿ ವೇಗದ ಈ ಟ್ರೈನ್ ಬರುವುದರೊಂದಿಗೆ ಈ ದೂರವನ್ನು ಎರಡು ಗಂಟೆಯೊಳಗೆ ತಲುಪಬಹುದಾಗಿದೆ.
ಯುಎಇ ಯಿಂದ ಭಾರತಕ್ಕೆ ಇಂಧನ ಆಮದು ಮಾಡಿಕೊಳ್ಳುವುದಕ್ಕೆ ಮತ್ತು ಭಾರತದಿಂದ ಯುಎಇಗೆ ಶುದ್ಧ ನೀರು ರಫ್ತು ಮಾಡುವುದಕ್ಕೂ ಈ ಟ್ರೈನನ್ನು ಬಳಸಲಾಗುವುದು ಎಂದು ತಿಳಿದುಬಂದಿದೆ.












