ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ.16: ದಕ್ಷಿಣ ದಿಲ್ಲಿಯಲ್ಲಿ ಪಿಝ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡಿದ್ದ ಯುವಕನ ಕೊರೊನ ಪರೀಕ್ಷಾ ಫಲಿತಾಂಶ ಪಾಸಿಟಿವ್ ಆಗಿದ್ದು ಆತನನ್ನು ರಾಮ್ ಮನೋಹರ ಲೋಹಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಫಿಝ ಬಾಯ್ 19 ವರ್ಷದ ಹುಡುಗಲ್ಲಿ ಕೊರೊನಾ ದೃಢಪಟ್ಟಿದೆ.
ಎಪ್ರಿಲ್ 12ರವರೆಗೆ ಈತ ಹೋಮ್ ಡೆಲಿವರಿ ಮಾಡಿದ್ದ. ಎರಡು ವಾರಗಳಲ್ಲಿ ಯುವಕ 72 ಕುಟುಂಬಗಳಿಗೆ ಆಹಾರ ತಲುಪಿಸಿದ್ದ. ಈತನೊಂದಿಗೆ ಸಂಪರ್ಕದಲ್ಲಿ ಇದ್ದ 20 ಡೆಲಿವರಿ ಏಜೆಂಟ್ಗಳನ್ನು ಛತ್ತರಪುರದ ಕೊರೆಂಟೈನ್ ಕೇಂದ್ರದಲ್ಲಿರಿಸಲಾಗಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












