ಸನ್ಮಾರ್ಗ ವಾರ್ತೆ
ಗುವಾಹಟಿ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅಸ್ಸಾಮಿನ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್-ಎಐಯುಡಿಎಫ್ ಸಖ್ಯ ಮಹಾಸಖ್ಯವಲ್ಲ, ಮಹಾ ಸುಳ್ಳು ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ಗೆ ನಾಯಕರೋ ಆಶಯವೋ ಇಲ್ಲ. ಅವರು ಮಹಾಸುಳ್ಳರು. ರಾಜ್ಯದ ಅಸ್ಮಿತೆ ಮತ್ತು ಸಂಸ್ಕೃತಿಯನ್ನು ಅಪಾಯಕ್ಕೊಡ್ಡುತ್ತಿರುವ ಸಖ್ಯ ಇದು. ನುಸುಳುಕೋರರಿಗೆ ಶಕ್ತಿ ತುಂಬುವ ಪಾರ್ಟಿ ಕಾಂಗ್ರೆಸ್ನ ಸಖ್ಯದಲ್ಲಿದೆ. ಕಾಂಗ್ರೆಸ್ ಜನರಲ್ಲಿ ಒಡಕು ಮೂಡಿಸುತ್ತಿದೆ. ಅವರು ವೋಟಿಗಾಗಿ ಜನರನ್ನು ಕಟ್ಟಿಕೊಡುತ್ತಿದ್ದಾರೆ.
ರಾಜ್ಯದ ಪರಂಪತೆ, ಸಂಸ್ಕೃತಿಯ ಚಿಹ್ನೆಯನ್ನು ಬಿಜೆಪಿ ಸಂರಕ್ಷಿಸುತ್ತಿದೆ. ಆದ್ದರಿಂದ ಬಿಜೆಪಿಯಲ್ಲಿ ಜನರಿಗೆ ನಂಬಿಕೆ ಹೆಚ್ಚಳವಾಗುತ್ತಿದೆ. ರಾಜ್ಯಕ್ಕೆ ನುಸುಳುಕೋರರಿಗೆ ಪ್ರವೇಶ ನೀಡುವವರಿಗೆ ನೀವು ಅಧಿಕಾರ ಕೊಡುತ್ತೀರಾ ಎಂದು ಮೋದಿ ಕೇಳಿದ್ದಾರೆ.
ಬದ್ರುದ್ದೀನ್ ಅಜ್ಮಮಲ್ರ ಎಐಯುಡಿಎಫ್ನೊಂದಿಗೆ ಕಾಂಗ್ರೆಸ್ ಸಖ್ಯವನ್ನು ಟೀಕಿಸಲು ಪ್ರಧಾನಿ ಈ ರೀತಿ ಹೇಳಿದ್ದಾರೆ. ಕಾಂಗ್ರೆಸ್ನ ಮಹಾ ಸ್ಕೈ ಬಿಜೆಪಿ- ಅಸ್ಸಾಂ ಗಣಪರಿಷತ್ ಸಖ್ಯ ಅಸ್ಸಾಂ ಚುನಾವಣೆಯಲ್ಲಿ ಎದುರುಬದುರು ಸ್ಪರ್ಧಿಸುತ್ತಿದೆ.












