ಹಿಂದೂ ದೇವರ ಅಪಮಾನ ಘಟನೆ: ಅಮೆಝಾನ್ ವಿರುದ್ಧ ದೂರು ದಾಖಲು

0
385

ಹೊಸದಿಲ್ಲಿ,ಮೇ 18: ಇ-ಕಾಮರ್ಸ್ ಕಂಪೆನಿಯಾದ ಅಮೆಝಾನ್ ಹಿಂದೂ ದೇವರನ್ನು ಅಪಮಾನಿಸಿದ್ದು ಅದರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನೊಯಿಡ ಪೊಲೀಸರು ಅಮೆರಿಕ ಮೂಲಕದ ಕಂಪೆನಿಯ ವಿರುದ್ಧ ಟಾಯ್ಲೆಟ್ ಸೀಟ್ ಕವರ್‍ಗಳಲ್ಲಿ ಹಿಂದೂ ದೇವತೆಗಳ ಚಿತ್ರ ಮುದ್ರಿಸಿದ್ದಕ್ಕೆ ಕೇಸು ದಾಖಲಿಸಿಕೊಂಡಿದ್ದಾರೆ.

ಕಂಪೆನಿಯ ಅಮೆರಿಕದ ವೆಬ್‍ಸೈಟ್ ಮೂಲಕ ಈ ಉತ್ಪನ್ನ ಮಾರಾಟವಾಗಿದ್ದು ಇದರ ಚಿತ್ರಗಳು ಹೊರ ಬರುವುದರೊಂದಿಗೆ ಕಂಪೆನಿಯ ವಿರುದ್ಧ ಬಹಿಷ್ಕಾರ ಕೂಗು ವ್ಯಾಪಕವಾಗಿತ್ತು. ಇದೇ ವೇಳೆ ಈ ಉತ್ಪನ್ನಗಳನ್ನು ವೆಬ್‍ಸೈಟ್‍ನಿಂದ ತೆರವುಗೊಳಿಸಲಾಗಿದೆ ಎಂದು ಕಂಪೆನಿ ವಕ್ತಾರ ತಿಳಿಸಿದರು. ಎರಡು ಗುಂಪುಗಳ ನಡುವೆ ದ್ವೇಷ ಸೃಷ್ಟಿಸಿದ ಆರೋಪದಲ್ಲಿ ಪೊಲೀಸರಿಗೆ ದೂರು ಸಿಕ್ಕಿದೆ. ನೊಯಿಡ ಸೆಕ್ಟರ್ 58ರ ಪೊಲೀಸರು ದೂರು ಪಡೆದು ದಾಖಲಿಸಿದ್ದಾರೆ. ಭಾರತದಂಡ ಸಂಹಿತೆ ಕಲ153ರ ಪ್ರಕಾರ ಕೇಸು ದಾಖಲಿಸಿಕೊಳ್ಳಲಾಯಿತೆಂದು ಪೊಲೀಸರು ಹೇಳಿದರು.