ಮತಯಂತ್ರಗಳಿಗೆ ಆಮ್ ಆದ್ಮಿ ಪಾರ್ಟಿ ಕಾವಲು!

0
380

ಹೊಸದಿಲ್ಲಿ,ಮೇ 18: ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ಇರಿಸಲಾದ ಕೇಂದ್ರಗಳಿಗೆ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಕಾವಲು ನಿಂತಿದ್ದಾರೆ. ದಿಲ್ಲಿಯಲ್ಲಿ ಮತಯಂತ್ರಗಳನ್ನು ಇರಿಸಿದ ಎಲ್ಲ ಕೇಂದ್ರಗಳ ಸಮೀಪ ಇಪ್ಪತ್ತು ಮಂದಿ ಕಾರ್ಯಕರ್ತರನ್ನು ಆಮ್ ಆದ್ಮಿಪಾರ್ಟಿ ಕಾವಲು ನಿಲ್ಲಿಸಿದೆ. ಚುನಾವಣಾ ಆಯೋಗ ಸಿಸಿಟಿವಿ ಇಟ್ಟರೂ ನಮಗೆ ವಿಶ್ವಾಸ ಇಲ್ಲ. ಬಿಜೆಪಿ ಯಂತ್ರಗಳಲ್ಲಿ ತಿರುಚುವಿಕೆ ಮಾಡಿ ಚುನಾವಣಾ ಫಲಿತಾಂಶಗಳನ್ನು ಬುಡಮೇಲು ಗೊಳಿಸಬಹುದು ಎಂದು ಆಮ್ ಆದ್ಮಿ ಪಾರ್ಟಿ ನಾಯಕರು ಹೇಳುತ್ತಿದ್ದಾರೆ.

ಆಮ್ ಆದ್ಮಿ ನಾಯಕ ಮತ್ತು ದಕ್ಷಿಣ ದಿಲ್ಲಿ ಅಭ್ಯರ್ಥಿ ರಾಘವ್ ಚಡ್ಡ ನೇತೃತ್ವದಲ್ಲಿ ಮತಯಂತ್ರಗಳಿಗೆ ಕಾವಲು ಏರ್ಪಡಿಸಲಾಗಿದೆ. ದಿಲ್ಲಿಯಲ್ಲಿ ಆರನೆ ಹಂತದ ಮತದಾನದಲ್ಲಿ ಮೇ 12ರಂದು ದಿಲ್ಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಅಂದಿನಿಂದ ಆಮ್ ಆದ್ಮಿ ಕಾರ್ಯಕರ್ತರು ಮತಯಂತ್ರಗಳನ್ನು ಇರಿಸಿದ್ದಲ್ಲಿ ಕಾವಲು ಕಾಯುತ್ತಿದ್ದಾರೆ. ಎಲ್ಲ ಮತಯಂತ್ರ ಇರಿಸಿದ ಸ್ಥಳಗಳಲ್ಲಿ ದಿನದ 24 ಗಂಟೆಗಳಂತೆ 20 ಮಂದಿಯ ತಂಡವನ್ನು ನಿಲ್ಲಿಸಲಾಗಿದೆ. ಉತ್ತರ ಪ್ರದೇಶ ಸಹಿತ ಹಲವು ಕಡೆ ಮತ ಯಂತ್ರಗಳನ್ನು ಕಳ್ಳಸಾಗಾಟ ಮಾಡಿದ ವರದಿಗಳಿದ್ದವು. ಕಳೆದ ವರ್ಷ ಛತ್ತೀಸ್ಗಡ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ ಕಾರ್ಯಕರ್ತರು ಈ ರೀತಿ ಕಾವಲು ನಿಂತಿದ್ದರು.